Home Uncategorizedಅಬೀರ ಕೊಡಿಮಾರು ನೂತನ ವಿದ್ಯುತ್ ಪರಿವರ್ತಕಕ್ಕೆ ಚಾಲನೆ 

ಅಬೀರ ಕೊಡಿಮಾರು ನೂತನ ವಿದ್ಯುತ್ ಪರಿವರ್ತಕಕ್ಕೆ ಚಾಲನೆ 

by anamika

ಅಬೀರ ಕೊಡಿಮಾರು ನೂತನ ವಿದ್ಯುತ್ ಪರಿವರ್ತಕಕ್ಕೆ ಚಾಲನೆ

 

ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಬೀರ ಕೊಡಿಮಾರು ದೈವಸ್ಥಾನದ ಹತ್ತಿರ ಅಳವಡಿಸಲಾದ ನೂತನ ವಿದ್ಯುತ್ ಪರಿವರ್ತಕಕ್ಕೆ ಚಾಲನೆ ನೀಡಲಾಯಿತು.ಕೊಡಿಮಾರು ದೈವಸ್ಥಾನದ ಗೌರವಾಧ್ಯಕ್ಷರಾದ ತಿಮ್ಮಪ್ಪ ಗೌಡ ಕಾಯೆರ್ತಡಿ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಜಯಂತ ಅಬೀರ, ಪವರ್ ಮ್ಯಾನ್ ಸಂತೋಷ್ , ಶಿವಾನಂದ, ಮುಕ್ತಾರ್, ರಂಜಿತ್ ಹೊಸೊಕ್ಲು, ಮನೋಜ್ ಬರೆಮೇಲು,ಕೌಶಿಕ್ ಬರೆಮೇಲು ಉಪಸ್ಥಿತರಿದ್ದರು.ಈ ವಿದ್ಯುತ್ ಪರಿವರ್ತಕ ಅಳವಡಿಕೆಯಿಂದ ಬರೆಮೇಲು ,ಹೊಸೊಕ್ಲು,ಕಾಯೆರ್ತಡಿ, ಅಬೀರ ಪರಿಸರದ ಲೋ ವೋಲ್ಟೇಜ್ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ.

You may also like

Leave a Comment