ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರ ಸತ್ಯನಾರಾಯಣ ಪೂಜೆ, ನರಸಿಂಹ ಜಯಂತಿ, ವಿಶೇಷ ಭಜನೆ
ಕಡಬ ತಾಲೂಕು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಆಶ್ರಯದಲ್ಲಿ 50ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ, ನರಸಿಂಹ ಜಯಂತಿ ಹಾಗೂ ವಿಶೇಷ ಭಜನಾ ಕಾರ್ಯಕ್ರಮವು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು.
ಸಂಜೆ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ 2-00 ಗಂಟೆಯಿಂದ ರಾತ್ರಿ 10-00 ಗಂಟೆ ತನಕ ಆಹ್ವಾನಿತ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಿತು. ಶ್ರೀ ಲಕ್ಷ್ಮೀಪ್ರಿಯ ಮಹಿಳಾ ಭಜನಾ ಮಂಡಳಿ ಬೆಳಂದೂರು- ಕಾಣಿಯೂರು, ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಬರೆಪ್ಪಾಡಿ, ಜೋಕಾಲಿ ಭಜನಾ ಮಂಡಳಿ ಕೃಷ್ಣಾಪುರ ಕಾಯ್ಮಣ, ಶ್ರೀ ಮಹಾವಿಷ್ಣು ಭಜನಾ ಮಂಡಳಿ ಮುಗೇರು ಸವಣೂರು, ಶ್ರೀ ಹರಿ ಭಜನಾ ಮಂಡಳಿ ಪುಣ್ಚತ್ತಾರು, ಶ್ರೀರಾಮ ಭಜನಾ ಮಂಡಳಿ ಎಣ್ಮೂರು, ಶ್ರೀಸುಬ್ರಹ್ಮಣ್ಯ ಭಜನಾ ಮಂಡಳಿ ನಾವೂರು ಇವರು ಭಜನಾ ಸೇವೆ ನಡೆಸಿಕೊಟ್ಟರು.


.ಭಜನಾ ಮಂಡಳಿಯ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ, ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ ,ಕಾರ್ಯದರ್ಶಿ ಜಯಂತ ಅಬೀರ,ಕೋಶಾಧಿಕಾರಿ ಕೀರ್ತಿಕುಮಾರ್ ಎಳುವೆ ಹಾಗೂ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.