Home Uncategorizedಅಡ್ಯಾರ್ ನದಿಗೆ ಹಾರಿ ಖ್ಯಾತ ನಿರ್ಮಾಪಕ ಕೆ. ರಾಜನ್ ಆತ್ಮಹತ್ಯೆ

ಅಡ್ಯಾರ್ ನದಿಗೆ ಹಾರಿ ಖ್ಯಾತ ನಿರ್ಮಾಪಕ ಕೆ. ರಾಜನ್ ಆತ್ಮಹತ್ಯೆ

by anamika

ಅಡ್ಯಾರ್ ನದಿಗೆ ಹಾರಿ ಖ್ಯಾತ ನಿರ್ಮಾಪಕ ಕೆ. ರಾಜನ್ ಆತ್ಮಹತ್ಯೆ

 

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ, ಬರಹಗಾರ ಹಾಗೂ ನಟ ಕೆ. ರಾಜನ್ ಅವರು ಅಡ್ಯಾರ್ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ.

ಭಾನುವಾರ ನಡೆದ ಈ ಘಟನೆ ಇಡೀ ತಮಿಳು ಸಿನಿಮಾ ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿದೆ. ಆರಂಭಿಕ ಮಾಹಿತಿಯ ಪ್ರಕಾರ, ಕೆ. ರಾಜನ್ ಅವರು ಎಂದಿನಂತೆ ಕಾರಿನಲ್ಲಿ ಬಂದು ವಾಕಿಂಗ್‌ಗೆ ತೆರಳಿದ್ದರು. ಈ ವೇಳೆ ಅಡ್ಯಾರ್ ಸೇತುವೆಯ ಮೇಲೆ ವೇಗವಾಗಿ ನಡೆದ ಅವರು, ಯಾರೂ ಊಹಿಸದ ರೀತಿಯಲ್ಲಿ ಕೆಲವೇ ಕ್ಷಣಗಳಲ್ಲಿ ನದಿಗೆ ಹಾರಿದ್ದಾರೆ ಎನ್ನಲಾಗಿದೆ.

ಚಾಲಕ ಗಾಬರಿಯಿಂದ ಕೂಗಿದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಹಾಗೂ ಅಡ್ಯಾರ್ ಪೊಲೀಸರು ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದು, ಸ್ವಲ್ಪ ಸಮಯದ ಬಳಿಕ ಕೆ. ರಾಜನ್ ಅವರ ಮೃತದೇಹವನ್ನು ಪತ್ತೆ ಹಚ್ಚಲಾಗಿದೆ.

ಕಳೆದ ಎರಡು ತಿಂಗಳುಗಳಿಂದ ಕೆ. ರಾಜನ್ ಯಾವುದೇ ಸಿನಿಮಾ ಕಾರ್ಯಕ್ರಮಗಳು ಅಥವಾ ಸಂಘದ ಸಭೆಗಳಲ್ಲಿ ಭಾಗವಹಿಸಿರಲಿಲ್ಲ ಎಂದು ತಿಳಿದುಬಂದಿದೆ. ಕುಟುಂಬದವರೊಂದಿಗೆ ಉಂಟಾದ ಭಿನ್ನಾಭಿಪ್ರಾಯಗಳು ಹಾಗೂ ಮನಸ್ತಾಪದ ಹಿನ್ನೆಲೆಯಲ್ಲಿ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.

ನಿರ್ಮಾಪಕ, ನಿರ್ದೇಶಕ ಹಾಗೂ ನಟನಾಗಿ ತಮಿಳು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಕೆ. ರಾಜನ್ ಅವರ ನಿಧನಕ್ಕೆ ಸಿನಿ ವಲಯದ ಗಣ್ಯರು ಸಂತಾಪ ಸೂಚಿಸಿದ್ದಾರೆ.

You may also like

Leave a Comment