Home Uncategorizedಕೊಟ್ಟಿಯೂರು ವೈಶಾಖ ಮಹೋತ್ಸವಕ್ಕೆ ಕ್ಷಣಗಣನೆ: ಮೇ 30ರಿಂದ ಶಿವ ದರ್ಶನ ಆರಂಭ

ಕೊಟ್ಟಿಯೂರು ವೈಶಾಖ ಮಹೋತ್ಸವಕ್ಕೆ ಕ್ಷಣಗಣನೆ: ಮೇ 30ರಿಂದ ಶಿವ ದರ್ಶನ ಆರಂಭ

by anamika

ಕೊಟ್ಟಿಯೂರು ವೈಶಾಖ ಮಹೋತ್ಸವಕ್ಕೆ ಕ್ಷಣಗಣನೆ: ಮೇ 30ರಿಂದ ಶಿವ ದರ್ಶನ ಆರಂಭ

ಕೇರಳದ ದಕ್ಷಿಣ ಕಾಶಿ ಖ್ಯಾತಿಯ ವೈಶಾಖ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭಕ್ತರಿಗೆ ಮೇ 30ರ ಮಧ್ಯರಾತ್ರಿಯಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ದೇವರ ದರ್ಶನ ಈಗಾಗಲೇ ಆರಂಭವಾಗಿದೆ ಎಂಬ ತಪ್ಪು ಮಾಹಿತಿಯಿಂದ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಕೊಟ್ಟಿಯೂರಿಗೆ ಆಗಮಿಸಿ ನಿರಾಶರಾಗಿರುವ ಘಟನೆ ನಡೆದಿದೆ.

ಈ ಹಿನ್ನೆಲೆ ದೇವಸ್ಥಾನ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಈ ವರ್ಷದ ವೈಶಾಖ ಮಹೋತ್ಸವದ ಅಂಗವಾಗಿ ಅಕ್ಕರೆ ಕೊಟ್ಟಿಯೂರು ದೇವಸ್ಥಾನ ಪ್ರವೇಶ ಹಾಗೂ ದೇವರ ದರ್ಶನಕ್ಕೆ ಮೇ 30ರಿಂದ ಅಧಿಕೃತ ಚಾಲನೆ ದೊರೆಯಲಿದೆ ಎಂದು ತಿಳಿಸಿದೆ. ಪ್ರತಿದಿನ ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ.

ಇನ್ನು ಮಹಿಳಾ ಭಕ್ತರಿಗೆ ಜೂನ್‌ 20ರ ಮಧ್ಯಾಹ್ನದವರೆಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಜೂನ್‌ 24ರಂದು ಈ ವರ್ಷದ ಕೊನೆಯ ಪೂಜೆ ನಡೆಯಲಿದೆ ಎಂದು ದೇವಸ್ಥಾನ ಮೂಲಗಳು ಮಾಹಿತಿ ನೀಡಿವೆ.

ಸ್ವಚ್ಛತೆ ಕಾಪಾಡಲು ಮನವಿ

ಕಳೆದ ವರ್ಷದ ವೈಶಾಖ ಮಹೋತ್ಸವದ ವೇಳೆ ಭಕ್ತರು ಬಟ್ಟೆ ಹಾಗೂ ಒಳ ಉಡುಪುಗಳನ್ನು ದೇವಸ್ಥಾನ ಪರಿಸರದಲ್ಲಿ ಎಲ್ಲೆಂದರಲ್ಲಿ ಎಸೆದು ತೆರಳಿದ್ದರಿಂದ ಸ್ವಚ್ಛತೆ ಕಾಪಾಡುವುದು ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಭಕ್ತರು ಪರಿಸರ ಸ್ವಚ್ಛತೆ ಕಾಪಾಡಿ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕಳೆದ ವರ್ಷ ಸಿನಿತಾರೆಯರ ಭೇಟಿ

ಕಳೆದ ವರ್ಷ ವೈಶಾಖ ಮಹೋತ್ಸವದ ವೇಳೆ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ಹಾಗೂ ಮಕ್ಕಳೊಂದಿಗೆ ಆಗಮಿಸಿ ದೇವರ ದರ್ಶನ ಪಡೆದಿದ್ದರು.

You may also like

Leave a Comment