48
ಕಾಮಗಾರಿ ಕನಿಷ್ಠ ವೇತನದಲ್ಲಿ 60% ಹೆಚ್ಚಳ: ಕಾರ್ಮಿಕರಿಗೆ ಭರ್ಜರಿ ಸಿಹಿಸುದ್ದಿ
ಬೆಂಗಳೂರು: ರಾಜ್ಯದ ಕಾಮಗಾರಿ ಕಾರ್ಮಿಕರಿಗೆ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕನಿಷ್ಠ ವೇತನದಲ್ಲಿ ಶೇಕಡಾ 60ರಷ್ಟು ಹೆಚ್ಚಳಕ್ಕೆ ಆದೇಶ ಹೊರಡಿಸಲಾಗಿದೆ. ಸುಮಾರು 1.5 ಕೋಟಿಗೂ ಹೆಚ್ಚು ಹೆಬ್ಬೆಟ್ಟು ಕಾರ್ಮಿಕರಿಗೆ ಈ ತೀರ್ಮಾನದಿಂದ ಪ್ರಯೋಜನವಾಗಲಿದೆ.
ಹೊಸ ವೇತನ ಪರಿಷ್ಕರಣೆಯು 18 ಹೊಸ ಉದ್ಯಮ ಸೆಕ್ಟರ್‌ಗಳಿಗೆ ಅನ್ವಯವಾಗಲಿದ್ದು, ವಿವಿಧ ವರ್ಗದ ಕಾರ್ಮಿಕರ ಮಾಸಿಕ ವೇತನದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕೌಶಲ್ಯ ಆಧಾರಿತ ಕಾರ್ಮಿಕ ವರ್ಗಗಳಿಗೆ ಹಂತ ಹಂತವಾಗಿ ವೇತನ ಹೆಚ್ಚಳ ಜಾರಿಗೆ ತರಲಾಗಿದೆ.

ಅಪ್ರೆಂಟಿಸ್, ಅನ್‌ಸ್ಕಿಲ್, ಸೆಮಿ-ಸ್ಕಿಲ್, ಸ್ಕಿಲ್‌ಡ್ ಸೇರಿದಂತೆ ವಿವಿಧ ವಿಭಾಗಗಳ ಕಾರ್ಮಿಕರಿಗೆ ಪರಿಷ್ಕೃತ ವೇತನ ನಿಗದಿ ಮಾಡಲಾಗಿದ್ದು, ಕಾರ್ಮಿಕರ ಜೀವನಮಟ್ಟ ಸುಧಾರಣೆಗೆ ಸರ್ಕಾರದ ಮಹತ್ವದ ಹೆಜ್ಜೆ ಎಂದು ಹೇಳಲಾಗಿದೆ.

ಹೊಸ ವೇತನ ಜಾರಿಗೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆ ಮಾರ್ಗಸೂಚಿ ಪ್ರಕಟಿಸಿದ್ದು, ಕೈಗಾರಿಕಾ ಹಾಗೂ ನಿರ್ಮಾಣ ಕ್ಷೇತ್ರದ ಲಕ್ಷಾಂತರ ಕಾರ್ಮಿಕರಿಗೆ ಇದರಿಂದ ನೇರ ಲಾಭವಾಗಲಿದೆ.