Home Uncategorizedಹೊಸ ಆಧಾರ್ ಆ್ಯಪ್‌ಗೆ ಬ್ರೇಕ್: ಹಲವಾರು ಸೌಲ್ಯಗಳ ಸ್ಥಗಿತ!

ಹೊಸ ಆಧಾರ್ ಆ್ಯಪ್‌ಗೆ ಬ್ರೇಕ್: ಹಲವಾರು ಸೌಲ್ಯಗಳ ಸ್ಥಗಿತ!

by anamika

🪪 ಹೊಸ ಆಧಾರ್ ಆ್ಯಪ್‌ಗೆ ಬ್ರೇಕ್: ಹಲವಾರು ಸೌಲ್ಯಗಳ ಸ್ಥಗಿತ!ಹೊಸ ಆಧಾರ್ ಆ್ಯಪ್‌ಗೆ ಬ್ರೇಕ್: ಹಲವಾರು ಸೌಲ್ಯಗಳ ಸ್ಥಗಿತ!

ಯುಐಡಿಎಐ (UIDAI) ಪರಿಚಯಿಸಿರುವ ಹೊಸ ಆಧಾರ್ ಆ್ಯಪ್‌ ಬಳಕೆಯಲ್ಲಿ ತಾಂತ್ರಿಕ ತೊಂದರೆಗಳು ಎದುರಾಗುತ್ತಿರುವ ಹಿನ್ನೆಲೆ, ಕೆಲವು ಪ್ರಮುಖ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದಾಗಿ ವರದಿಯಾಗಿದೆ. QR ಕೋಡ್‌ ಆಧಾರಿತ ಪರಿಶೀಲನೆ, ಫೇಸ್‌ ಆಥೆಂಟಿಕೇಶನ್‌, ಡಿಜಿಟಲ್ ಐಡಿ ಶೇರ್‌ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಈ ಆ್ಯಪ್‌ಗೆ ಆರಂಭಿಕ ಹಂತದಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

📌 ಆ್ಯಪ್‌ನ ಪ್ರಮುಖ ವೈಶಿಷ್ಟ್ಯಗಳು:
• ಫೇಸ್‌ ಆಥೆಂಟಿಕೇಶನ್ ಮೂಲಕ ಲಾಗಿನ್
• QR ಕೋಡ್ ಸ್ಕ್ಯಾನ್ ಮೂಲಕ ಆಧಾರ್ ಪರಿಶೀಲನೆ
• ಫಿಸಿಕಲ್ ಆಧಾರ್ ಕಾರ್ಡ್ ಅವಶ್ಯಕತೆ ಇಲ್ಲ
• ಆಯ್ದ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳುವ ‘Selective Share’ ವ್ಯವಸ್ಥೆ
• ಬಯೋಮೆಟ್ರಿಕ್ ಲಾಕ್/ಅನ್‌ಲಾಕ್ ಸೌಲಭ್ಯ

📍 ಬಳಕೆದಾರರ ದೂರುಗಳೇನು?
ಕೆಲವರು ಫೇಸ್‌ ಆಥೆಂಟಿಕೇಶನ್ ವಿಫಲವಾಗುತ್ತಿದೆ, OTP ಸಮಸ್ಯೆ, ಬಯೋಮೆಟ್ರಿಕ್ ಸಿಂಕ್ ಆಗದಿರುವುದು ಸೇರಿದಂತೆ ಹಲವು ತಾಂತ್ರಿಕ ತೊಂದರೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕೆಲವು ಸೇವೆಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯುಐಡಿಎಐ ಹೊಸ ಆ್ಯಪ್‌ ಮೂಲಕ ಸುರಕ್ಷಿತ ಹಾಗೂ ಪೇಪರ್‌ಲೆಸ್‌ ಗುರುತಿನ ವ್ಯವಸ್ಥೆ ರೂಪಿಸುವ ಗುರಿ ಹೊಂದಿದ್ದು, ಮುಂದಿನ ದಿನಗಳಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸುವ ಭರವಸೆ ನೀಡಿದೆ.

You may also like

Leave a Comment