Home Uncategorizedವಸತಿರಹಿತ ಅಲೆಮಾರಿ ಸಮುದಾಯದವರಿಗೆ ಮನೆ ನಿರ್ಮಾಣ ಸಹಾಯಧನ; ಮೇ 30 ಅರ್ಜಿ ಕೊನೆ ದಿನ!

ವಸತಿರಹಿತ ಅಲೆಮಾರಿ ಸಮುದಾಯದವರಿಗೆ ಮನೆ ನಿರ್ಮಾಣ ಸಹಾಯಧನ; ಮೇ 30 ಅರ್ಜಿ ಕೊನೆ ದಿನ!

by anamika

🏠 ವಸತಿರಹಿತ ಅಲೆಮಾರಿ ಸಮುದಾಯದವರಿಗೆ ಮನೆ ನಿರ್ಮಾಣ ಸಹಾಯಧನ; ಮೇ 30 ಅರ್ಜಿ ಕೊನೆ ದಿನ!

ಕರ್ನಾಟಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ವಸತಿರಹಿತ ಅಲೆಮಾರಿ ಸಮುದಾಯದ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ ₹1.75 ಲಕ್ಷ ಹಾಗೂ ನಗರ ಪ್ರದೇಶದವರಿಗೆ ₹2 ಲಕ್ಷ ಸಹಾಯಧನ ನೀಡಲಾಗುತ್ತಿದೆ.

📌 ಯಾರಿಗೆ ಲಾಭ?
• ಪ.ಜಾತಿ ಸಮುದಾಯಗಳು – ಅಜಿಲ, ಬೈರ, ನಲಿಕೆ, ಪರವನ್, ಮಾಯಿಲ, ಚಕ್ಕಲಿಯನ್
• ಪ.ಪಂಗಡ ಸಮುದಾಯಗಳು – ಕೊರಗ, ಮಲೆಕುಡಿಯ

📌 ಅರ್ಜಿ ಸಲ್ಲಿಸಲು ಮೇ 30 ಕೊನೆಯ ದಿನ
ಹೆಚ್ಚಿನ ಮಾಹಿತಿಗಾಗಿ ಪುತ್ತೂರು ಸಮಾಜ ಕಲ್ಯಾಣ ಇಲಾಖೆ ಕಚೇರಿಯನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

You may also like

Leave a Comment