Home Uncategorizedಸಾಂದೀಪನಿ ಶಾಲಾ ಪ್ರಾರಂಭೋತ್ಸವ ಮತ್ತು ದೀಕ್ಷಾ ಸಂಭ್ರಮ   

ಸಾಂದೀಪನಿ ಶಾಲಾ ಪ್ರಾರಂಭೋತ್ಸವ ಮತ್ತು ದೀಕ್ಷಾ ಸಂಭ್ರಮ   

by anamika

ಸಾಂದೀಪನಿ ಶಾಲಾ ಪ್ರಾರಂಭೋತ್ಸವ ಮತ್ತು ದೀಕ್ಷಾ ಸಂಭ್ರಮ

 

ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ 2026-27 ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಿಗೆ ದೀಕ್ಷಾ ಸಮಾರಂಭ ಹಾಗೂ ಶಾಲಾ ಪ್ರಾರಂಭೋತ್ಸವವು ಜರುಗಿತು. ವೇದಮೂರ್ತಿಗಳಾದ ಶ್ರೀವತ್ಸ ಕೆದಿಲಾಯರ ನೇತೃತ್ವದಲ್ಲಿ ಗಣಹೋಮ ಮತ್ತು ದುರ್ಗಾ ಪೂಜಾ ಕಾರ್ಯಕ್ರಮವು ಈ ಸಂದರ್ಭದಲ್ಲಿ ನೆರವೇರಲ್ಪಟ್ಟಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರ, ಮುಖ್ಯ ಅತಿಥಿಗಳಾದ ಶಾಲಾ ಆಡಳಿತಮಂಡಳಿಯ ಸದಸ್ಯರು ಪೋಷಕರು ಆದ ಡಾ ಶಿವಾನಂದ, ಕೋಶಾಧಿಕಾರಿ ಶ್ರೀ ಹರೀಶ್ ಪುತ್ತೂರಾಯರು, ಕಾರ್ಯದರ್ಶಿಗಳಾದ ಶ್ರೀ ಕೃಷ್ಣಪ್ರಸಾದ್ ಕೆದಿಲಾಯ, ಶಾಲಾ ಉಪಾಧ್ಯಕ್ಷರು ಪ್ರಸನ್ನ ಭಟ್ , ಜತೆ ಕಾರ್ಯದರ್ಶಿ ಶ್ರೀ ಸುಬ್ರಾಯ ಬಿ ಎಸ್ ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ಮಾತುಗಳೊಂದಿಗೆ ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ದೀಕ್ಷೆ ನೀಡಿದರು. ನಂತರ ಆರತಿ ಬೆಳಗಿ ತಿಲಕವಿಡುವ ಮೂಲಕ ಹೊಸ ವಿದ್ಯಾರ್ಥಿಗಳನ್ನು ಸ್ವಾಗತ ಮಾಡಲಾಯಿತು.

 

ಮುಖ್ಯ ಅತಿಥಿಗಳಾದ ಡಾ ಶಿವಾನಂದ ರವರು ಮಾತನಾಡಿ ಶಾಲೆಯಲ್ಲಿ ಏನೇ ವ್ಯತ್ಯಾಸಗಳು ಕಂಡು ಬಂದಲ್ಲಿ ತಿಳಿಸುವುದು ಹಾಗೂ ಶಾಲಾ ಅಭಿವೃದ್ಧಿ ಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಎಂದು ಪೋಷಕರ ಲ್ಲಿ ವಿನಂತಿಸಿದರು.

ಹಾಗೂ ವಿದ್ಯಾರ್ಥಿಗಳು ಪ್ರತಿ ವರ್ಷ ಹೊಸತನ್ನು ಕಲಿಯುವುದು, ಎಲ್ಲಾ ದಿನವೂ ಚಟುವಟಿಕೆಯಿಂದ ತೊಡಗಿಕೊಳ್ಳುವುದು. ಎಂದು 25ನೇ ವರ್ಷಕ್ಕೆ ಶುಭ ಹಾರೈಸಿದರು.

ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯರು ಮಾತನಾಡಿ ಶಾಲಾ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಮೊಬೈಲ್ ಫೋನನ್ನು ಬಳಸದೆ ಸಮಯವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ತಮಗೆ ಆಸಕ್ತಿ ಇರುವ ಚಟುವಟಿಕೆಗಳಲ್ಲಿ ಮುಂದೆ ಬಂದು ಕೀರ್ತಿವಂತರಾಗಿ ಬಾಳಿ ದೇವರ ಅನುಗ್ರಹ ನಿಮಗಿರಲಿ ಎಂದರು. ಉಪಾಧ್ಯಕ್ಷರಾದ ಶ್ರೀ ಪ್ರಸನ್ನ ಭಟ್ ರವರು ಮಾತನಾಡಿ ಈ ಸಂಸ್ಥೆಯು ಸಂಸ್ಕಾರಯುತ ಶಿಕ್ಷಣವನ್ನು ಕೊಡಲು ಪ್ರಯತ್ನಿಸುತ್ತಿದ್ದು ಅನೇಕ ಮಹಾಪುರುಷರ ಬದುಕನ್ನು ಮಾದರಿಯಾಗಿ ಇಟ್ಟುಕೊಂಡು ಬದುಕಬೇಕು.

ಕಠಿಣ ಪ್ರಯತ್ನದಿಂದ ಸಾಧನೆ ಸಾಧ್ಯ ಎಂದರು. ಜೊತೆಕಾರ್ಯದರ್ಶಿ ಶ್ರೀ ಸುಬ್ರಾಯ ಬಿ ಎಸ್ ರವರು ಮಾತನಾಡಿ ಈ ಶೈಕ್ಷಣಿಕ ವರ್ಷದಲ್ಲಿ ಉತ್ತಮ ವಿದ್ಯಾಭ್ಯಾಸ ದೊರಕುವಂತಾಗಲಿ ಎಂದು ಶುಭ ಹಾರೈಸಿದರು.

ನಂತರ ಹುಟ್ಟು ಹಬ್ಬ ಆಚರಿಸಿಕೊಂಡ ವಿದ್ಯಾರ್ಥಿಗಳಿಗೆ ಉಡುಗೊರೆ ನೀಡಿ ಆಶೀರ್ವದಿಸಿ ಅಧ್ಯಕ್ಷರಾದ ಶ್ರೀಯುತ ಜಯರಾಮ ಕೆದಿಲಾಯ ಶಿಬರ ರವರು ಮಾತನಾಡುತ್ತಾ ಪ್ರತಿ ದಿನವೂ ಮನುಷ್ಯನಿಗೆ ವಿಶೇಷ. ಒಂದು ಕ್ಷಣವನ್ನು ವ್ಯರ್ಥ ಮಾಡಬಾರದು ಸಮಯವನ್ನು ಶ್ರದ್ದೆಯಿಂದ ಕಳೆಯಿರಿ ಕೀರ್ತಿವಂತರಾಗಿ ಬಾಳಿ ಎಂದು ಶುಭ ಹಾರೈಸಿದರು.

ವಿದ್ಯಾರ್ಥಿಗಳಾದ ಕು ಆರಾದ್ಯ ಹಾಗೂ ಕು ವಿಶಾಖಾ ಪ್ರಾರ್ಥಿಸಿದರು. ಶ್ರೀಮತಿ ವಾಣಿ ರವರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಹರೀಶ್ ಪುತ್ತೂರಾಯ ರವರು ಎಲ್ಲರನ್ನೂ ಸ್ವಾಗತಿಸಿದರು. ಶ್ರೀ ಮತಿ ಪ್ರಮೀಳಾ ರವರು ಧನ್ಯವಾದಗೈದರು.

You may also like

Leave a Comment