ಯಕ್ಷಗಾನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಣೆ; ಬೆಳ್ಳಿಚಡವಿನಲ್ಲಿ ಪ್ರತಿಷ್ಠಾನದ ಶ್ಲಾಘನೀಯ ಕಾರ್ಯ
ಶ್ರೀ ಅಯ್ಯಪ್ಪ ಶಾರದಾಂಬ ಭಜನಾ ಮಂದಿರ ಬೆಳ್ಳಿಚಡವು ಈಶ್ವರ ಮಂಗಲ ಇಲ್ಲಿ ದಿನಾಂಕ 30.5.2026 ನೇ ಶನಿವಾರದಂದು ಸಂಜೆ 6 ಗಂಟೆಗೆ ಶ್ರೀ ಶಿವ ಪಂಚಾಕ್ಷರಿ ಯಕ್ಷ ಪ್ರತಿಷ್ಠಾನಂ ಬೆಳ್ಳಿಚಡವು ಈಶ್ವರಮಂಗಲ ಇದರ ಮಾಸಿಕ ಕಲಾ ಸೇವೆ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ನಡೆಯಿತು. ತಾಳಮದ್ದಳೆಯ ಸೇವಾಕರ್ತರಾಗಿ ಶ್ರೀ ಜಗದೀಶರಾವ್ ಈಶ್ವರ ಮಂಗಳ ಇವರು ಸಹಕರಿಸಿದರು. ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ವತಿಯಿಂದ ಸಂಘದ ಆಶ್ರಯದಲ್ಲಿ ನಡೆಯುವ ಹಿಮ್ಮೇಳ ಮತ್ತು ಮಮ್ಮೇಳ ತರಗತಿಯಲ್ಲಿ ತರಬೇತಿ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ನೋಟ್ ಪುಸ್ತಕ ಗಳು,ಪೆನ್, ಪೆನ್ಸಿಲ್, ಸ್ಕೇಲ್,ಕಲರ್ ಪೆನ್ಸಿಲ್, ಬೈಂಡ್ ಶೀಟ್ ಇತ್ಯಾದಿಗಳನ್ನು ಒಳಗೊಂಡ ಕಿಟ್ ಗಳನ್ನು ವಿತರಿಸಲಾಯಿತು .

ಸುಮಾರು 50 ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದು ಕಿಟ್ಟನ್ನು ಪಡೆದುಕೊಂಡಿದ್ದು, ಪ್ರತಿಷ್ಠಾನದ ಈ ಕಾರ್ಯ ಸರ್ವರ ಪ್ರಶಂಸೆಗೆ ಪಾತ್ರವಾಯಿತು . ಊರಿನ ಅನೇಕ ವಿದ್ಯಾಭಿಮಾನಿಗಳು ಕಲಾಭಿಮಾನಿಗಳ ಸಹಕಾರದೊಂದಿಗೆ ಪ್ರತಿಷ್ಠಾನದ ಈ ಕಾರ್ಯ ಯಶಸ್ವಿಯಾಯಿತು. ಶ್ರೀ ಅಚ್ಯುತ ಮಾಸ್ಟರ್ , ಗಿರೀಶ್ ರೈ ಮರಕಡ,ಶ್ರೀ ಮೋಹನ ಮೆಣಸಿನಕಾನ, ಶ್ರೀ ರಾಮ ನಾಯ್ಕ್ ಬಸಿರಡ್ಕ, ಶ್ರೀ ರಾಜೇಶ್(ತತ್ವಮಸಿ) ಪಂಚೋಡಿ,ರಾಜೇಶ್ ಪಂಚೋಡಿ, ಶ್ರೀಮತಿ ನೂತನ ಪ್ರವೀಣ್ ನೆಟ್ಟಾರು,ಶ್ರೀ ಮಹಾಲಿಂಗ ಪಂಚೋಡಿ, ಶ್ರೀ ಚಂದ್ರಶೇಖರ ಗೌಡ ಅಮೃತ ಚಿಕನ್ ಈಶ್ವರಮಂಗಲ,ಶ್ರೀ ಪ್ರಭಾಕರ ಆಚಾರ್ಯ ಹಿರಿಯಾಣ, ಶ್ರೀ ಭರತ್ ಪೂಜಾರಿ ಮಯ್ಯಾಳ,ಶ್ರೀಮತಿ ಪುಷ್ಪಾವತಿ ಶೀನಪ್ಪ ಪೂಜಾರಿ ಮಯ್ಯಾಳ, ಶ್ರೀ ಸದಾನಂದ ಮಯ್ಯಾಳ , ಯಕ್ಷಗಾನ ನಾಟ್ಯ ಗುರುಗಳಾದ ಶ್ರೀ ಜಯಪ್ರಕಾಶ್ ಕಲ್ಮಡ್ಕ ಮುಂತಾದವರು ಪ್ರತಿಷ್ಠಾನದ ಈ ಶ್ಲಾಘನೀಯ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಗುರುಸ್ವಾಮಿ, ನಾರಾಯಣ ಪಾಟಾಳಿ ಮಯ್ಯಾಳ,ಸುನಿಲ್ ಮಾಸ್ಟರ್ ಮಯ್ಯಾಳ, ಸ್ಥಳೀಯರಾದ ದೇವಪ್ಪ ಗೌಡ ಬೆಳ್ಳಿಚಡವು ಉಪಸ್ಥಿತರಿದ್ದರು.ಭಾಗವತಿಕೆ ಗುರುಗಳಾದ ಶ್ರೀ ಮೋಹನ ಮೆಣಸಿನಕಾನ, ಶ್ರೀ ಪ್ರಭಾಕರ ಆಚಾರ್ಯ ಹಿರಿಯಾಣ, ಶ್ರೀ ಸದಾನಂದ ಮಯ್ಯಾಳ ಇವರ ಮಾರ್ಗದರ್ಶನದೊಂದಿಗೆ ಈ ಕಾರ್ಯಕ್ರಮವು ನಡೆಯಿತು. ವಿದ್ಯಾರ್ಥಿಗಳ ಪೋಷಕರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸ್ವಾಗತ ಮತ್ತು ಧನ್ಯವಾದಗಳೊಂದಿಗೆ ಶ್ರೀಮತಿ ಶೈಲಜಾ ಕಾರ್ಯಕ್ರಮವನ್ನು ನಿರೂಪಿಸಿದರು.