Home Uncategorizedಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಗ್ರಾಮ ಸಭೆ: ಉದ್ಯೋಗ ಖಾತ್ರಿ ಬದಲಿಗೆ ಹೊಸ ಯೋಜನೆಗಳ ಕುರಿತು ಚರ್ಚೆ

ಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಗ್ರಾಮ ಸಭೆ: ಉದ್ಯೋಗ ಖಾತ್ರಿ ಬದಲಿಗೆ ಹೊಸ ಯೋಜನೆಗಳ ಕುರಿತು ಚರ್ಚೆ

by Editor

ಬೆಂಗಳೂರು: ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಇದೇ ಜನವರಿ 26ರಂದು ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಲು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರವು ಈವರೆಗೆ ಜಾರಿಯಲ್ಲಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ಯನ್ನು (MGNREGA) ಹಿಂಪಡೆದು, ಅದರ ಬದಲಿಗೆ ಹೊಸದಾಗಿ ಜಾರಿಗೆ ತಂದಿರುವ “ವಿಕಸಿತ್ ಭಾರತ್ – ಗ್ಯಾರಂಟಿ ಯೋಜಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ್)” ಯೋಜನೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಈ ಸಭೆಯನ್ನು ಕರೆಯಲಾಗಿದೆ.

ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಪತ್ರ ಸಂಖ್ಯೆ: RDC-EGS/1257/2024ರ ಅನ್ವಯ, ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಬದಲಾವಣೆಗಳು ಮತ್ತು ಹೊಸ ಮಿಷನ್‌ನಡಿ ಸಿಗುವ ಉದ್ಯೋಗಾವಕಾಶ ಹಾಗೂ ಜೀವನೋಪಾಯದ ಮಾರ್ಗಗಳ ಬಗ್ಗೆ ಗ್ರಾಮೀಣ ಜನತೆಯಲ್ಲಿ ಜಾಗೃತಿ ಮೂಡಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ.

 

You may also like

Leave a Comment