87
ಪುತ್ತೂರು: ತಾಲೂಕಿನ ರೈತರ ಆರ್ಥಿಕ ಸಬಲೀಕರಣ ಮತ್ತು ಜಲ ಸಂರಕ್ಷಣೆಗಾಗಿ ಕೃಷಿ ಇಲಾಖೆಯು ‘ಕೃಷಿ ಭಾಗ್ಯ’ ಯೋಜನೆಯಡಿ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ, ನೀರು ಸಂಗ್ರಹಣೆಗೆ ಟಾರ್ಪಲಿನ್, ರಕ್ಷಣಾತ್ಮಕ ತಂತಿಬೇಲಿ ಹಾಗೂ ಸ್ಪ್ರಿಂಕ್ಲರ್ ಸೆಟ್‌ಗಳನ್ನು ಪ್ಯಾಕೇಜ್ ರೂಪದಲ್ಲಿ ಒದಗಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕರಾದ ಟಿ. ಜಿ. ಚೆಲುವರಂಗಪ್ಪ ತಿಳಿಸಿದ್ದಾರೆ.
ಈ ಸವಲತ್ತುಗಳಿಗೆ ಸಾಮಾನ್ಯ ವರ್ಗದ ರೈತರಿಗೆ 80% ಮತ್ತು ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ 90% ರಷ್ಟು ಭಾರಿ ಸಹಾಯಧನ ಲಭ್ಯವಿದೆ. ಆಸಕ್ತ ರೈತರು ಕೂಡಲೇ ತಮ್ಮ ಹತ್ತಿರದ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಮಳೆ ನೀರು ಕೊಯ್ಲು ಮತ್ತು ಸುಸ್ಥಿರ ಕೃಷಿಗೆ ಪೂರಕವಾದ ಈ ಯೋಜನೆಯ ಲಾಭ ಪಡೆಯಲು ಇಲಾಖೆ ಕೋರಿದೆ.