Home Uncategorizedಅಮಾಯಕ ದೀಪಕ್ ಸಾವಿಗೆ ಕಾರಣಳಾದ ಆರೋಪಿ ಶಿಂಜಿತಾ ಮುಸ್ತಫಾ ನಾಪತ್ತೆ!

ಅಮಾಯಕ ದೀಪಕ್ ಸಾವಿಗೆ ಕಾರಣಳಾದ ಆರೋಪಿ ಶಿಂಜಿತಾ ಮುಸ್ತಫಾ ನಾಪತ್ತೆ!

by Editor

ಬಸ್ಸಿನಲ್ಲಿ ಅನುಚಿತ ವರ್ತನೆ ಎಂದು ಅವಮಾನಿಸಿದರೆಂದು ಇನ್‌ಸ್ಟಾಗ್ರಾಂ ಮೂಲಕ ಯುವತಿ ಶಿಂಜಿತಾ ಮುಸ್ತಫಾ ಆರೋಪಿಸಿದ್ದ ನಂತರ, ಕೊಜಿಕ್ಕೋಡ್ ನಿವಾಸಿ ದೀಪಕ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪ್ರತಿಯಾದ ಯುವತಿ ವಿದೇಶಕ್ಕೆ ಪರಾರಿಯಾಗಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ.

ನಿನ್ನೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಯುವತಿ ಕಾಣೆಯಾಗಿದ್ದು, ಅವಳು ಮೊದಲಿನಿಂದಲೇ ದುಬೈಯಲ್ಲಿದ್ದ ಕಾರಣ ಮತ್ತೆ ದುಬೈಗೆ ತೆರಳಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ. ಅರೆಸ್ಟ್ ಭಯದಿಂದಲೇ ಯುವತಿ ಪರಾರಿಯಾಗಿದ್ದಾಳೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಜನರ ಹೇಳಿಕೆಗಳನ್ನು ದಾಖಲಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ನಿನ್ನೆ ಯುವತಿಯ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲು ಪೊಲೀಸರು ಪ್ರಯತ್ನಿಸಿದರೂ ಅದು ಲಭ್ಯವಾಗಲಿಲ್ಲ. ನಿನ್ನೆ ಯುವತಿಯ ಹಾಗೂ ಯುವಕನ ಕುಟುಂಬದವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದರು.

ಪೊಲೀಸರಿಗೆ ಲಭಿಸಿದ ಪ್ರಾಥಮಿಕ ಮಾಹಿತಿಯಂತೆ, ಯುವತಿ ಹೇಳಿಕೆ ನೀಡಿದ್ದು ಆದರೆ ಬಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂಬ ನಿರ್ಣಯಕ್ಕೆ ಪೊಲೀಸರು ಬಂದಿದ್ದಾರೆ.

ಈ ಪ್ರಕರಣದಲ್ಲಿ ಯುವತಿಯನ್ನು ಪ್ರತಿಯಾಗಿ ಮಾಡಿಕೊಂಡು ಎಫ್‌ಐಆರ್ ದಾಖಲು ಮಾಡಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) 108 ಅಡಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪವನ್ನು ಹೊರಿಸಲಾಗಿದೆ. ಈ ಸೆಕ್ಷನ್‌ನಡಿ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಸಾಧ್ಯತೆ ಇದೆ.

ಮೃತ ದೀಪಕ್ ಅವರ ತಾಯಿ ಕೆ. ಕನ್ಯಕ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಲಭ್ಯವಾದ ಮಾಹಿತಿಗಳ ಆಧಾರದಲ್ಲಿ ಪ್ರಾಥಮಿಕ ಪರಿಶೀಲನೆ ನಡೆಸಿದ ಬಳಿಕವೇ ಎಫ್‌ಐಆರ್ ದಾಖಲಿಸಲಾಗಿದೆ. ಏನೇ ಆದರೂ ಮೃತ ದೀಪಕ್ ನ ಆತ್ಮಕ್ಕೆ ಶಾಂತಿ ಸಿಗಲಿ,ಆರೋಪಿ ಶಿಂಜಿತಾ ಮುಸ್ತಫಾಳಿಗೆ ಶಿಕ್ಷೆ ಆಗಲಿ.

You may also like

Leave a Comment