Home Uncategorizedಬೆಂಗಳೂರಿನಲ್ಲಿ ಇಂದಿನಿಂದ ಲಂಡನ್ ಮಾದರಿಯ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಸಂಚಾರ ಆರಂಭ

ಬೆಂಗಳೂರಿನಲ್ಲಿ ಇಂದಿನಿಂದ ಲಂಡನ್ ಮಾದರಿಯ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಸಂಚಾರ ಆರಂಭ

by Editor

ಬೆಂಗಳೂರು: ರಾಜಧಾನಿಯ ಪ್ರವಾಸೋದ್ಯಮಕ್ಕೆ ಹೊಸ ಕಳೆ ನೀಡಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಲಂಡನ್ ಮಾದರಿಯ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ಸುಗಳ ಸಂಚಾರವನ್ನು ಬುಧವಾರದಿಂದಲೇ ಆರಂಭಿಸಿದೆ. ನಗರದ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ಅನುಕೂಲವಾಗುವಂತೆ ಮೊದಲ ಹಂತದಲ್ಲಿ ಮೂರು ಬಸ್ಸುಗಳು ಕಾರ್ಯಾಚರಣೆಗಿಳಿದಿವೆ.

ಈ ವಿಶೇಷ ಬಸ್ಸುಗಳು ಲಾಲ್‌ಬಾಗ್, ಕಬ್ಬನ್ ಪಾರ್ಕ್, ವಿಧಾನಸೌಧ, ಕೆ.ಆರ್. ಮಾರುಕಟ್ಟೆ ಮತ್ತು ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಸೇರಿದಂತೆ ಬೆಂಗಳೂರಿನ ಐತಿಹಾಸಿಕ ಸ್ಥಳಗಳ ಮಾರ್ಗದಲ್ಲಿ ಸಂಚರಿಸಲಿವೆ. ಹಿಂದೆ ಬಿಎಂಟಿಸಿ ನಡೆಸುತ್ತಿದ್ದ ಡಬಲ್ ಡೆಕ್ಕರ್ ಸಂಚಾರ ಆರ್ಥಿಕ ನಷ್ಟದಿಂದ ಸ್ಥಗಿತಗೊಂಡಿತ್ತು. ಇದೀಗ ಕೆಎಸ್‌ಟಿಡಿಸಿ ಪ್ರವಾಸಿಗರನ್ನು ಆಕರ್ಷಿಸಲು ಈ ಯೋಜನೆಯನ್ನು ಮರುಜೀವಗೊಳಿಸಿದೆ. ತೆರೆದ ಮಾದರಿಯ ಈ ಬಸ್ಸುಗಳಲ್ಲಿ ಪ್ರಯಾಣಿಸುವುದು ಪ್ರವಾಸಿಗರಿಗೆ ನಗರದ ಸೌಂದರ್ಯವನ್ನು ಸವಿಯಲು ಹೊಸ ಅನುಭವ ನೀಡಲಿದೆ.

You may also like

Leave a Comment