101
ಮಂಗಳೂರು: ನಗರದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರಾಣಿಬೆನ್ನೂರು ಅಭಯಾರಣ್ಯದಿಂದ ತರಲಾಗಿದ್ದ ಕೃಷ್ಣಮೃಗವೊಂದು ಮಂಗಳವಾರ ರಾತ್ರಿ ನಿಗೂಢವಾಗಿ ಮೃತಪಟ್ಟಿದೆ. ಆರೋಗ್ಯವಾಗಿದ್ದ ಪ್ರಾಣಿ ಏಕಾಏಕಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ನಿಯಮದಂತೆ ಯಾವುದೇ ಪ್ರಾಣಿ ಮೃತಪಟ್ಟ 24 ಗಂಟೆಗಳ ಒಳಗೆ ಮರಣೋತ್ತರ ಪರೀಕ್ಷೆ ನಡೆಸಬೇಕು ಹಾಗೂ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ (CZA) ಮಾಹಿತಿ ನೀಡಬೇಕು. ಆದರೆ, ಬುಧವಾರ ರಾತ್ರಿಯವರೆಗೂ ಮರಣೋತ್ತರ ಪರೀಕ್ಷೆ ನಡೆಸದೆ ಮೃತದೇಹವನ್ನು ಶೀತಲೀಕರಣ ಘಟಕದಲ್ಲಿ ಇಡಲಾಗಿತ್ತು. ಜಿಲ್ಲಾಡಳಿತಕ್ಕೂ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.