Home Uncategorizedಶಿಮ್ಜಿತಾ ಮುಸ್ತಫಾ ಅರೆಸ್ಟ್! ಏನಿದರ ಹಿನ್ನೆಲೆ,ಇಲ್ಲಿದೆ ಸಂಪೂರ್ಣ ಮಾಹಿತಿ…

ಶಿಮ್ಜಿತಾ ಮುಸ್ತಫಾ ಅರೆಸ್ಟ್! ಏನಿದರ ಹಿನ್ನೆಲೆ,ಇಲ್ಲಿದೆ ಸಂಪೂರ್ಣ ಮಾಹಿತಿ…

by Editor

ಕೇರಳದ ಕೊಯಿಕ್ಕೋಡ್ ಜಿಲ್ಲೆಯ ಗೋವಿಂದಾಪುರಂ ನಿವಾಸಿ ಯು. ದೀಪಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಶಿಮ್ಜಿತಾ ಮುಸ್ತಫಾ ಅವರನ್ನು ಬುಧವಾರ ಕೇರಳ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಶಿಮ್ಜಿತಾರನ್ನು ವಡಕಾರದ ಸಂಬಂಧಿಯ ಮನೆಯಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ನಂತರ ಕೊಯಿಲಾಂಡಿ ತಾಲ್ಲೂಕು ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ಬಳಿಕ, ಕುನ್ನಮಂಗಲಂ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ನ್ಯಾಯಾಲಯ ಶಿಮ್ಜಿತಾರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಮನ್ಜೇರಿ ಮಹಿಳಾ ಜೈಲಿಗೆ ಕಳುಹಿಸಿದೆ.

📛🔍 ಬಹುದಿನಗಳ ಹುಡುಕಾಟ, ಲುಕ್‌ಔಟ್ ನೋಟಿಸ್ ನಂತರ ಬಂಧನ

ಈ ಪ್ರಕರಣದಲ್ಲಿ ಶಿಮ್ಜಿತಾ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ಪೊಲೀಸರು ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರು. ಅಲ್ಲದೆ ದೇಶದಿಂದ ಪರಾರಿಯಾಗದಂತೆ ತಡೆಯಲು ಲುಕ್‌ಔಟ್ ಸರ್ಕ್ಯುಲರ್ ಕೂಡ ಜಾರಿಗೊಳಿಸಲಾಗಿತ್ತು.

📛ವೈರಲ್ ವಿಡಿಯೋ ಹಿನ್ನೆಲೆ ಏನು

ಜನವರಿ 16ರಂದು ಕೇರಳದ ಪಯ್ಯನ್ನೂರು ಭಾಗದಲ್ಲಿ ನಡೆದ ಬಸ್ ಪ್ರಯಾಣದ ವೇಳೆ, ದೀಪಕ್ ತನ್ನನ್ನು ಲೈಂಗಿಕವಾಗಿ ಕಿರುಕುಳ ನೀಡಿದ ಎಂದು ಶಿಮ್ಜಿತಾ ಆರೋಪಿಸಿದ್ದರು

ಅವರು ಈ ಕುರಿತು ವೀಡಿಯೋ ಮಾಡಿ ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಅದು ಭಾರೀ ವೈರಲ್ ಆಗಿ 2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಇದರಿಂದ ದೀಪಕ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ, ಅವಮಾನ, ಟ್ರೋಲಿಂಗ್ ಶುರುವಾಯಿತು ಎಂದು ವರದಿಯಾಗಿದೆ.

📛ಮಾನಸಿಕ ಒತ್ತಡ ತಾಳಲಾರದೆ ದೀಪಕ್ ಆತ್ಮಹತ್ಯೆ

ಸಾರ್ವಜನಿಕ ಅವಮಾನ ಹಾಗೂ ಮಾನಸಿಕ ಆಘಾತದಿಂದ ನೊಂದ ದೀಪಕ್, ಜನವರಿ 18ರಂದು ಬೆಳಿಗ್ಗೆ ತನ್ನ ಮನೆಗೆ ಒಳಗಿರುವ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದರು

ಆ ಸಮಯದಲ್ಲಿ ಮನೆಯಲ್ಲಿ ಅವರ ಪೋಷಕರು ಮಾತ್ರ ಇದ್ದರು. ದೀಪಕ್ ಬೆಳಿಗ್ಗೆ ಎದ್ದಿಲ್ಲ, ಕೋಣೆಯಿಂದ ಪ್ರತಿಕ್ರಿಯೆ ಇಲ್ಲದ ಕಾರಣ ನೆರೆಹೊರೆಯವರನ್ನು ಕರೆಸಿ ಬಾಗಿಲು ಒಡೆದು ನೋಡಿದಾಗ, ಸೀಲಿಂಗ್ ಫ್ಯಾನ್ ಹುಕ್‌ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ದೀಪಕ್ ಮೃತದೇಹ ಪತ್ತೆ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

📛📝 ದೀಪಕ್ ತಾಯಿ ನೀಡಿದ ದೂರು: “ಸುಳ್ಳು ಆರೋಪ, ಸೋಶಿಯಲ್ ಮೀಡಿಯಾ ಫೇಮ್ ಗಾಗಿ”

ದೀಪಕ್ ಅವರ ತಾಯಿ ಕನ್ಯಾಕಾ ಪೊಲೀಸ್ ಠಾಣೆಗೆ ದೂರು ನೀಡಿ, ಶಿಮ್ಜಿತಾ ಮಾಡಿದ ಆರೋಪಗಳು ಸಂಪೂರ್ಣವಾಗಿ ಸುಳ್ಳು, ಹಾಗೂ ಸೋಶಿಯಲ್ ಮೀಡಿಯಾ ಫೇಮ್ ಪಡೆಯಲು ಇಂತಹ ಪ್ರಕರಣವನ್ನು ರೂಪಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

ಇದನ್ನಾಧರಿಸಿ ಜನವರಿ 19ರಂದು ಕೊಯಿಕ್ಕೋಡ್ ಮೆಡಿಕಲ್ ಕಾಲೇಜ್ ಪೊಲೀಸರು ಶಿಮ್ಜಿತಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ (Abetment to Suicide) ಪ್ರಕರಣ ದಾಖಲಿಸಿದ್ದಾರೆ.

📛📹 ಸಿಸಿಟಿವಿ ಪರಿಶೀಲನೆ:* ವೀಡಿಯೋ ಎಡಿಟ್ ಆಗಿದೆ ಎಂದು ಪೊಲೀಸರು ಹೇಳಿಕೆ

ಪೊಲೀಸರು ಘಟನೆಯಲ್ಲಿ ಸಂಬಂಧಿಸಿದ ಬಸ್‌ನ CCTV ದೃಶ್ಯಾವಳಿ ಸಂಗ್ರಹಿಸಿದ್ದಾರೆ.

ಪರಿಶೀಲನೆಯ ವೇಳೆ, ಶಿಮ್ಜಿತಾ ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದ್ದ ವೀಡಿಯೋ ಎಡಿಟ್ ಮಾಡಲ್ಪಟ್ಟಿದ್ದು, ಕಡಿಮೆ ಅವಧಿಗೆ ಕಟ್ ಮಾಡಿ ಹಾಕಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ

ಪೂರ್ಣ ವೀಡಿಯೋವನ್ನು ಪಡೆದುಕೊಳ್ಳಲು ಪೊಲೀಸರು ಸೈಬರ್ ಸೆಲ್ ಸಹಾಯ ಪಡೆಯಲು ನಿರ್ಧರಿಸಿದ್ದಾರೆ.

📛⚖️ ಮಾನವ ಹಕ್ಕು ಆಯೋಗದ ಹಸ್ತಕ್ಷೇಪ: 1 ವಾರದಲ್ಲಿ ವರದಿ ಸಲ್ಲಿಸಲು ಆದೇಶ

ಈ ಪ್ರಕರಣದಲ್ಲಿ ಕೇರಳ ರಾಜ್ಯ ಮಾನವ ಹಕ್ಕು ಆಯೋಗ ಕೂಡ ಮಧ್ಯಪ್ರವೇಶಿಸಿದ್ದು, ಉತ್ತರ ವಲಯದ ಡಿಐಜಿ (Deputy Inspector General of Police) ಅವರಿಗೆ ತನಿಖೆಯ ಕುರಿತು ಒಂದು ವಾರದೊಳಗೆ ಸಮಗ್ರ ವರದಿ ಸಲ್ಲಿಸಲು ನಿರ್ದೇಶನ ನೀಡಿದೆ.

You may also like

Leave a Comment