72
ಮಂಗಳೂರು: ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ಅಧಿಕೃತವಾಗಿ ಟೋಲ್ ವಸೂಲಿ ಆರಂಭವಾಗುವ ಮೊದಲೇ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಟಿಕೆಟ್ ದರ ಏರಿಕೆ ಮಾಡಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದ್ದು, ಕುಂಬಳೆಯಿಂದ ಮಂಗಳೂರಿಗೆ ಇದ್ದ 67 ರೂ. ಟಿಕೆಟ್ ದರ ಈಗ 75 ರೂ.ಗೆ ಏರಿಕೆಯಾಗಿದೆ.
ಅದೇ ರೀತಿ, ರಾಜಹಂಸ ಬಸ್‌ಗಳಲ್ಲಿ 80 ರೂ. ಇದ್ದ ದರವನ್ನು 10 ರೂ. ಹೆಚ್ಚಿಸಿ 90 ರೂ. ವಸೂಲಿ ಮಾಡಲಾಗುತ್ತಿದೆ. ವಿಶೇಷವೆಂದರೆ, ಕೇರಳ ರಾಜ್ಯ ರಸ್ತೆ ಸಾರಿಗೆ (KSRTC) ಬಸ್‌ಗಳಲ್ಲಿ ಇನ್ನೂ ದರ ಏರಿಕೆಯಾಗಿಲ್ಲ. ಟೋಲ್ ಸಂಗ್ರಹ ಅಧಿಕೃತವಾಗಿ ಶುರುವಾಗುವ ಮುನ್ನವೇ ಕರ್ನಾಟಕ ಸಾರಿಗೆ ಸಂಸ್ಥೆ ಪ್ರಯಾಣಿಕರ ಮೇಲೆ ದರದ ಹೊರೆ ಹಾಕಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.