Home Uncategorizedಗಂಡನನ್ನು ಕೊಂದು ರಾತ್ರಿ ಇಡೀ ಶವದ ಪಕ್ಕದಲ್ಲೇ ಪೋರ್ನ್ ವೀಡಿಯೊ ನೋಡಿದ ಪತ್ನಿ!

ಗಂಡನನ್ನು ಕೊಂದು ರಾತ್ರಿ ಇಡೀ ಶವದ ಪಕ್ಕದಲ್ಲೇ ಪೋರ್ನ್ ವೀಡಿಯೊ ನೋಡಿದ ಪತ್ನಿ!

by Editor

ಗುಂಟೂರು: ಪತ್ನಿಯೊಬ್ಬಳು ತನ್ನ ಪ್ರಿಯಕರನ ಸಹಾಯದಿಂದ ಗಂಡನನ್ನು ಉಸಿರುಗಟ್ಟಿಸಿ ಕೊಂದು, ನಂತರ ಶವದ ಪಕ್ಕದಲ್ಲೇ ಇಡೀ ರಾತ್ರಿ ಪೋರ್ನ್ ವೀಡಿಯೊಗಳನ್ನು ನೋಡಿದ್ದಾಳೆ ಎಂಬ ಆರೋಪ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

🔴ಅನುಮಾನಾಸ್ಪದ ಸಾವು

ಡುಗ್ಗಿರಾಲ ಮಂಡಲದ ಚಿಲುವೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಡುಗ್ಗಿರಾಲ ಸಬ್-ಇನ್ಸ್‌ಪೆಕ್ಟರ್ ವೆಂಕಟ ರವಿ ಬುಧವಾರ ತಿಳಿಸಿದ್ದಾರೆ. ಮೃತ ಲೋಕಂ ಶಿವನಾಗರಾಜು (ಈರುಳ್ಳಿ ವ್ಯಾಪಾರಿ) ಎರಡು ದಿನಗಳ ಹಿಂದೆ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಮೊದಲು ಕುಟುಂಬಕ್ಕೆ “ಎದೆನೋವಿನಿಂದ ಸಾವು” ಎಂದು ತಿಳಿಸಲಾಯಿತು. ಆದರೆ ದೇಹದಲ್ಲಿ ಕಂಡುಬಂದ ಗಾಯಗಳ ಕಾರಣ ಸ್ನೇಹಿತರು ಮತ್ತು ಬಂಧುಗಳಿಗೆ ಅನುಮಾನ ಹುಟ್ಟಿದ್ದು, ಪೊಲೀಸರಿಗೆ ದೂರು ನೀಡಲಾಯಿತು ಎನ್ನಲಾಗಿದೆ.

🔴ದಾಂಪತ್ಯ ಜೀವನ ಮತ್ತು ಅನೈತಿಕ ಸಂಬಂಧ

ಪೊಲೀಸರ ಮಾಹಿತಿ ಪ್ರಕಾರ, ಶಿವನಾಗರಾಜು ಅವರು 2007ರಲ್ಲಿ ಲಕ್ಷ್ಮಿ ಮಾಧುರಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಎರಡು ಮಕ್ಕಳಿದ್ದಾರೆ. ಮಾಧುರಿ ವಿಜಯವಾಡದ ಸಿನಿಮಾ ಥಿಯೇಟರ್ ಟಿಕೆಟ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಸಟ್ಟೇನಪಲ್ಲಿ ನಿವಾಸಿ ಗೋಪಿಯೊಂದಿಗೆ ಪರಿಚಯವಾಗಿತ್ತು. ಅದು ನಂತರ ಅನೈತಿಕ ಸಂಬಂಧವಾಗಿ ಬೆಳೆದಿತ್ತು.

ಮಾಧುರಿ ಗಂಡನ ಈರುಳ್ಳಿ ವ್ಯವಹಾರವನ್ನು ಕಡಿಮೆ ಮಟ್ಟದ ಕೆಲಸ ಎಂದು ತಿರಸ್ಕರಿಸಿ, ಅದನ್ನು ಬಿಡುವಂತೆ ಒತ್ತಡ ಹಾಕಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಗೋಪಿ ಹೈದರಾಬಾದ್‌ನಲ್ಲಿ ಕಾರ್ ಟ್ರಾವೆಲ್ ಬಿಸಿನೆಸ್ ನಡೆಸುತ್ತಿದ್ದ ಕಾರಣ, ಮಾಧುರಿ ಗಂಡನನ್ನು ಅಲ್ಲಿ ಕೆಲಸಕ್ಕೆ ಕಳಿಸಿದ್ದಳು. ನಂತರ ಶಿವನಾಗರಾಜು ಮರುಕಳಿಸಿ ಚಿಲುವೂರಿಗೆ ಬಂದಾಗ ದಂಪತಿಯ ನಡುವೆ ಜಗಳಗಳು ಹೆಚ್ಚಾಗಿವೆ.

ಪೊಲೀಸರ ಪ್ರಕಾರ, ಗಂಡ ಮನೆಲ್ಲೇ ಇರುವುದೇ ಮಾಧುರಿಗೆ ತನ್ನ ಪ್ರಿಯಕರನ ಜೊತೆಗಿನ ಸಂಬಂಧಕ್ಕೆ ಅಡ್ಡಿಯಾಗಿತ್ತು.

🔴ಪೂರ್ವಯೋಜಿತ ಕೊಲೆ

ಪೊಲೀಸರ ಪ್ರಕಾರ, ಮಾಧುರಿ ಜನವರಿ 18ರ ರಾತ್ರಿ ಪೂರ್ವಯೋಜಿತವಾಗಿ ಈ ಕೃತ್ಯವನ್ನು ನಡೆಸಿದ್ದಾಳೆ. ಅವಳು ಬಿರಿಯಾನಿ ಮಾಡಿ, ಶಿವನಾಗರಾಜು ಪಾಲಿಗೆ ಸುಮಾರು 20 ನಿದ್ರಾ ಮಾತ್ರೆಗಳನ್ನು ಮಿಶ್ರಣ ಮಾಡಿದ್ದಾಳೆ. ಊಟ ಮಾಡಿದ ಬಳಿಕ ಅವರು ಆಳ ನಿದ್ರೆಗೆ ಜಾರಿದ್ದಾರೆ.

ರಾತ್ರಿ ಸುಮಾರು 11.30ಕ್ಕೆ ಪ್ರಿಯಕರ ಗೋಪಿ ಮನೆಗೆ ಬಂದಿದ್ದಾನೆ. ಗೋಪಿಯು ಶಿವನಾಗರಾಜು ಎದೆಯ ಮೇಲೆ ಕುಳಿತುಕೊಂಡು, ಮಾಧುರಿ ತಲೆಯ ಮೇಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಗೋಪಿ ಅಲ್ಲಿಂದ ತೆರಳಿದ್ದಾನೆ.

🔴ಶವದ ಪಕ್ಕದಲ್ಲೇ ಪೋರ್ನ್ ವೀಡಿಯೊ ನೋಡಿದ ರಾಕ್ಷಸಿ!

ಪೊಲೀಸರ ಪ್ರಕಾರ, ಕೊಲೆಯ ಬಳಿಕ ಮಾಧುರಿ ಒಂಟಿಯಾಗಿ ಮನೆಯಲ್ಲೇ ಉಳಿದು, ಇಡೀ ರಾತ್ರಿ ತನ್ನ ಮೊಬೈಲ್‌ನಲ್ಲಿ ಪೋರ್ನ್ ವೀಡಿಯೊಗಳನ್ನು ನೋಡಿದ್ದಾಳೆ ಎನ್ನಲಾಗಿದೆ. ಬೆಳಗಿನ ಜಾವ ಸುಮಾರು 4 ಗಂಟೆಗೆ ನೆರೆಹೊರೆಯವರಿಗೆ ಕರೆ ಮಾಡಿ, “ಗಂಡ ಎದೆನೋವಿನಿಂದ ಮೃತಪಟ್ಟಿದ್ದಾರೆ” ಎಂದು ಹೇಳಿದ್ದಾಳೆ.

🔴ಗಾಯಗಳಿಂದ ಬಯಲಾಗಿದ ಸತ್ಯ

ದಂಪತಿಗಳ ಜಗಳಗಳು ಮತ್ತು ಮಾಧುರಿಯ ಅನೈತಿಕ ಸಂಬಂಧದ ಬಗ್ಗೆ ನೆರೆಹೊರೆಯವರಿಗೆ ತಿಳಿದಿದ್ದರಿಂದ ಅವರು ಅನುಮಾನಗೊಂಡಿದ್ದಾರೆ. ಅಂತ್ಯಕ್ರಿಯೆಗೆ ದೇಹವನ್ನು ಕರೆದೊಯ್ಯುವ ವೇಳೆ, ಮೃತನ ಕಿವಿಯಿಂದ ರಕ್ತ ಬರುತ್ತಿರುವುದು ಮತ್ತು ಕಿವಿಯ ಬಳಿ ಗಾಯ ಕಂಡು ಸ್ನೇಹಿತರು ಗಾಬರಿಗೊಂಡಿದ್ದಾರೆ.

ತಕ್ಷಣವೇ ಅವರು ಮೃತನ ತಂದೆಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸ್ ದೂರು ದಾಖಲಾಗಿದೆ.

🔴ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ದೃಢ

ಪೊಲೀಸರು ಪ್ರಕರಣ ದಾಖಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ವರದಿಯಲ್ಲಿ ಮೃತನ ಎದೆಯ ಎಲುಬುಗಳಿಗೆ ಮುರಿತ ಉಂಟಾಗಿದ್ದು, ಉಸಿರುಗಟ್ಟಿನಿಂದ ಸಾವು ಸಂಭವಿಸಿದೆ ಎಂದು ದೃಢಪಟ್ಟಿದೆ.

ವಿಚಾರಣೆ ವೇಳೆ ಮಾಧುರಿ ಅಪರಾಧ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

You may also like

Leave a Comment