Home Uncategorizedಬದಿಯಡ್ಕ: ಸಿಕ್ಕ ಹಣ ಹಿಂತಿರುಗಿಸಿ ಆದರ್ಶ ಮೆರೆದ ಸತ್ಯಪ್ರೇಮ ಮತ್ತು ರೇಖ ಅವರಿಗೆ ಪಂಚಾಯತ್ ಅಭಿನಂದನೆ

ಬದಿಯಡ್ಕ: ಸಿಕ್ಕ ಹಣ ಹಿಂತಿರುಗಿಸಿ ಆದರ್ಶ ಮೆರೆದ ಸತ್ಯಪ್ರೇಮ ಮತ್ತು ರೇಖ ಅವರಿಗೆ ಪಂಚಾಯತ್ ಅಭಿನಂದನೆ

by Editor

ಕರ್ತವ್ಯದ ಮಧ್ಯೆ ಬಿದ್ದು ಸಿಕ್ಕಿದ ಹಣವನ್ನು ಬದಿಯಡ್ಕ ಪೊಲೀಸ್ ಠಾಣೆಗೆ ಒಪ್ಪಿಸಿ ಆದರ್ಶ ಮೆರೆದ ಹರಿತ ಕರ್ಮ ಸೇನಾ ಕಾರ್ಯಕರ್ತೆಯರಿಗೆ ಗ್ರಾಮ ಪಂಚಾಯತು ಅಧ್ಯಕ್ಷರ ನೇತೃತ್ವದಲ್ಲಿ ಗೌರವಿಸಲಾಯಿತು.

ಬದಿಯಡ್ಕ ಗ್ರಾಮ ಪಂಚಾಯತು 5 ನೇ ವಾರ್ಡು ಮೂಕಂಪಾರೆಯ ಹರಿತ ಕರ್ಮ ಸೇನೆಯ ಕಾರ್ಯಕರ್ತೆಯರಾದ ಸತ್ಯಪ್ರೇಮ, ರೇಖ ಎಂಬಿವರಿಗೆ ಮೂಕಂಪಾರೆ ಶ್ರೀರಾಮ ಮಂದಿರ ಬಳಿಯಿಂದ ಹಣ ಬಿದ್ದು ಸಿಕ್ಕಿತ್ತು. ಈ ಹಣವನ್ನು ಅವರು ಕೂಡಲೇ ಬದಿಯಡ್ಕ ಪೊಲೀಸರಿಗೆ ಒಪ್ಪಿಸಿ ಆದರ್ಶ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಗ್ರಾಮ ಪಂಚಾಯತು ಅಧ್ಯಕ್ಷ ಶ್ರೀ ಡಿ ಶಂಕರ ಅವರು ಶಾಲು ಹೊದಿಸಿ ಅಭಿನಂದಿಸಿದರು. ಗ್ರಾಮ ಪಂಚಾಯತು ಉಪಾಧ್ಯಕ್ಷೆ ಅಶ್ವಿನಿ.ಕೆ.ಎಂ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅವಿನಾಶ್ ರೈ  ಬದಿಯಡ್ಕ, ರಜನಿ ಸಂದೀಪ್ , ಹಮೀದ್ ಕೆಡೆಂಜಿ, ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ, ಉಷ ಪಳ್ಳತ್ತಡ್ಕ, ಶಾಮ ಪ್ರಸಾದ ಸರಲಿ ಮೊದಲಾದವರು ಉಪಸ್ಥಿತರಿದ್ದರು.

You may also like

Leave a Comment