107
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಣಿಯೂರು ಇಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪರಮೇಶ್ವರ ಅನಿಲರವರು ಪ್ರತಿಜ್ಞಾ ವಿಧಿಯನ್ನು ಬೋಧಿಸುವುದರೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಸ್ ಡಿ.ಎಂ.ಸಿ ಉಪಾಧ್ಯಕ್ಷರಾದ ಯಶೋಧ ನೇರೋಳಡ್ಕ, ಗ್ರಾಮ ಪಂಚಾಯತ್ ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಗೌರಿ ಮಾದೋಡಿ, ಎಸ್ ಡಿ ಎಂ ಸಿ ಸದಸ್ಯರಾದ ಮೋಹಿನಿ, ಗೀತಾ ಅಜಿರಂಗಳ, ಸುಮಿತ್ರಾ ಬಂಡಾಜೆ, ವಸಂತಿ ಅಜಿರಂಗಳ, ಆಶಾ ಕಟ್ಟತ್ತಾರು, ಪವಿತ್ರ, ಚಂದ್ರಶೇಖರ ಬೈತಡ್ಕ, ಸೀತಾರಾಮ ಮಿತ್ತಮೂಲೆ, ದಿನೇಶ್ ಅನ್ಯಾಡಿ, ರಮೇಶ್ ಮಾದೋಡಿ, ಮಹಮ್ಮದ್ ಹನೀಫ್, ಚಂದ್ರಶೇಖರ ಮಲೆಕೆರ್ಚಿ, ಕಾಣಿಯೂರು ಅಂಗನವಾಡಿ ಕಾರ್ಯಕರ್ತೆ ಜಯಶ್ರೀ, ಶಾಲೆಯ ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.