ಬೆಂಗಳೂರು, ಫೆ.14:ಕನ್ನಡ ಬೆಳ್ಳಿ ತೆರೆಯ ಇತಿಹಾಸದಲ್ಲಿ ಅಪರೂಪದ ಭಕ್ತಿ-ಸಾಂಸ್ಕೃತಿಕ ಪ್ರಯೋಗವಾಗಿ ಮೂಡಿಬಂದ ಸಂಕೀರ್ತನ ಚಿತ್ರವು ಫೆಬ್ರವರಿ 14ರಂದು ಮಧ್ಯಾಹ್ನ 2.30ಕ್ಕೆ ಬೆಂಗಳೂರಿನಲ್ಲಿ ತೆರೆ ಕಾಣಲಿದೆ.
ಕೆ. ಪದ್ಮಕಲಾ ಗುಂಡೂರಾವ್ ಕುಟುಂಬ ಅರ್ಪಿಸುವ, ಸಾಫಲ್ಯ ಮೂವೀಸ್ ನಿರ್ಮಾಣದ ಈ ಚಿತ್ರದಲ್ಲಿ ಮಹಾಸಂತರ ಮಹಾಸಮಾಗಮವನ್ನು ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ಅನಾವರಣಗೊಳಿಸಲಾಗಿದೆ.
ಶ್ರೀ ಶ್ರೀಪಾದರಾಜರು, ಶ್ರೀ ವ್ಯಾಸರಾಜರು, ಶ್ರೀ ವಾದಿರಾಜರು, ಶ್ರೀ ವೈಕುಂಠದಾಸರು, ಶ್ರೀ ಪುರಂದರದಾಸರು, ಶ್ರೀ ಕನಕದಾಸರು, ಕುಮಾರವ್ಯಾಸ ಹಾಗೂ ತಿಮ್ಮಣ್ಣಕವಿ ಅವರ ದಿವ್ಯ ಮಹಿಮೆ ಮತ್ತು ಕೀರ್ತನೆಗಳ ಸಂಗಮವೇ ಈ ಚಿತ್ರದ ವಿಶೇಷತೆ.
ಈ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಮ್ಮೂರಿನ ಯುವ ಪ್ರತಿಭೆ ಮಿಥುನ್ ಕುಮಾರ್ ಸೋನ ಗಮನಸೆಳೆದಿದ್ದಾರೆ. ಅವರ ಅಭಿನಯ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದ್ದು, ಚಿತ್ರದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದೆ.
📍 ಪ್ರದರ್ಶನ ಸ್ಥಳ:ಡಾ. ರಾಜ್‌ಕುಮಾರ್ ಭವನ,ಡಾ. ಅಂಬರೀಶ್ ಆಡಿಟೋರಿಯಂ,ಕರ್ನಾಟಕ ಕಲಾವಿದರ ಸಂಘ (ರಿಜಿಸ್ಟರ್ಡ್),ನಂ.5, ಪಂಪ ಮಹಾಕವಿ ರಸ್ತೆ,ಚಾಮರಾಜಪೇಟೆ, ಬೆಂಗಳೂರು