ಕಡಬ ಕೊರಿಯಾನ ಚಾರ್ವಾಕದಲ್ಲಿ ಬ್ರಹ್ಮ ಬೈದರ್ಕಳ ಗರಡಿ ಪ್ರತಿಷ್ಠಾ ಕಲಶೋತ್ಸವ ಹಾಗೂ ನೇಮೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ
ಕಡಬ: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕೋರಿಯಾನದಲ್ಲಿರುವ ಬ್ರಹ್ಮ ಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ಪ್ರತಿಷ್ಠಾ ಕಲಶೋತ್ಸವ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಹಾಗೂ ಪರಿವಾರ ದೈವಗಳ ನೇಮೋತ್ಸವವು ಏಪ್ರಿಲ್ 22ರ ಬುಧವಾರದಿಂದ ಏಪ್ರಿಲ್ 25ರ ಶನಿವಾರದವರೆಗೆ ವೈಭವದಿಂದ ನಡೆಯಲಿದೆ.
ಈ ಮಹೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆಯನ್ನು ಕೋರಿಯಾನ ಗರಡಿ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಜಯಕುಮಾರ್ ಸೊರಕೆ, ಗರಡಿ ಸೇವಾ ಟ್ರಸ್ಟ್ ಅಧ್ಯಕ್ಷ ಸತ್ಯನಾರಾಯಣ ಕಲ್ಲುರಾಯ, ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಜೀರ್ಣೋದ್ಧಾರ ಸಮಿತಿ ಸಂಚಾಲಕ ಗಣೇಶ್ ಉದುನಡ್ಕ ,
ಟ್ರಸ್ಟ್ ಉಪಾಧ್ಯಕ್ಷ ವಸಂತ ದಲಾರಿ, ಕಾರ್ಯದರ್ಶಿ ಬಾಲಕೃಷ್ಣ ರೈ ಕಾಸ್ಪಡಿ ಗುತ್ತು, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ವಿನೋದ್ ಮತ್ತು ಪೂವಪ್ಪ ದೈಪಿಲ, ಸ್ವಯಂಸೇವಕ ಸಮಿತಿ ಅಧ್ಯಕ್ಷ ನಂದನ್ ಕಜೆ ಹಾಗೂ ಟ್ರಸ್ಟಿಗಳಾದ ಗೋಪಾಲಕೃಷ್ಣ ಅಭಿಕಾರ, ಪ್ರಸನ್ನ ಅಭಿಕಾರ, ಅನಿಲ್ ನಡುಬೈಲ್, ನಯನ ಕಲಾಯಿ ಉಪಸ್ಥಿತರಿದ್ದರು.
ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ವಿಶ್ವನಾಥ ದೇವಿ ನಗರ, ಕೇಶವ ನಾಯಕ್, ನಾರ್ಣಪ್ಪ ಜತ್ತೋಡಿ, ಮಾಧವ ಕಲಾಯಿ, ಜತ್ತಪ್ಪ ಗೌಡ ಜತ್ತೋಡಿ, ಅವಿನಾಶ್ ದಲಾರಿ, ನಾರಾಯಣ ಜತ್ತೋಡಿ ಸೇರಿದಂತೆ ಅನೇಕ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮಹೋತ್ಸವದ ಸಂದರ್ಭ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೈವದ ಕೃಪೆಗೆ ಪಾತ್ರರಾಗುವಂತೆ ಕ್ಷೇತ್ರದ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.