Home Uncategorizedಮಾರ್ಚ್ 17 :ಕಾಣಿಯೂರು ಶ್ರೀ ಲಕ್ಷ್ಮೀ ನೃಸಿಂಹ ದೇವರ ಮತ್ತು ಮುಖ್ಯ ಪ್ರಾಣ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ 

ಮಾರ್ಚ್ 17 :ಕಾಣಿಯೂರು ಶ್ರೀ ಲಕ್ಷ್ಮೀ ನೃಸಿಂಹ ದೇವರ ಮತ್ತು ಮುಖ್ಯ ಪ್ರಾಣ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ 

March 17: Consecration Anniversary of Kaniyoor Sri Lakshmi Narasimha Deva and Mukhyaprana Deva

by anamika

ಮಾರ್ಚ್ 17 :ಕಾಣಿಯೂರು ಶ್ರೀ ಲಕ್ಷ್ಮೀ ನೃಸಿಂಹ ದೇವರ ಮತ್ತು ಮುಖ್ಯ ಪ್ರಾಣ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ 

 

ಕಡಬ ತಾಲೂಕು ಕಾಣಿಯೂರು ಶ್ರೀ ಜಗದ್ಗುರು ಶ್ರೀ ಮನ್ಮಾಧ್ವಾಚಾರ್ಯ ಮೂಲ ಮಹಾ ಸಂಸ್ಥಾನಂ ಮಠ ಶ್ರೀ ಕಾಣಿಯೂರು ಮಠದಲ್ಲಿ ಶ್ರೀ ಲಕ್ಷ್ಮೀ ನೃಸಿಂಹ ದೇವರ ಮತ್ತು ಮುಖ್ಯ ಪ್ರಾಣ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ , ಶ್ರೀ ದೇವರಿಗೆ ಮುಷ್ಟಿ ಕಾಣಿಕೆ ಸಮರ್ಪಣೆ ಹಾಗೂ ಮಹಾ ಮೃತ್ಯುಂಜಯ ಹೋಮ ದಿನಾಂಕ 17-03-2026ರ ಮಂಗಳವಾರ ನಡೆಯಲಿದೆ.

ದಿನಾಂಕ 16-03-2026 ಸೋಮವಾರ ಸಂಜೆ 4-00ಗಂಟೆಗೆ ಹಸಿರು ಕಾಣಿಕೆ ಸಮರ್ಪಣೆ,ತೋರಣ ಮುಹೂರ್ತ

ರಾತ್ರಿ 7-00 ಗಂಟೆಗೆ ಶ್ರೀ ದೇವರಿಗೆ ರಂಗಪೂಜೆ

ದಿನಾಂಕ 17-03-2026 ಮಂಗಳವಾರ ಬೆಳಿಗ್ಗೆ 5-00 ಗಂಟೆಯಿಂದ ನೃಸಿಂಹ ಹೋಮ ಸಹಿತ ವಾಯು ಸ್ತುತಿ ಹೋಮ, ದೇವರಿಗೆ ನವಕ ಕಲಶಾಭಿಷೇಕ, ದೇವರಿಗೆ ಪ್ರಸನ್ನ ಪೂಜೆ

ಬೆಳಿಗ್ಗೆ 8-00 ಗಂಟೆಯಿಂದ 12 ಕಾಯಿ ಗಣಹೋಮ, ದುರ್ಗಾ ಹೋಮ, ಆಶ್ಲೇಷಾ ಬಲಿ, ಚಾವಡಿ ದೈವಗಳ ತಂಬಿಲ ನಂತರ ಮುಷ್ಟಿ ಕಾಣಿಕೆ ಸಮರ್ಪಣೆ ಮತ್ತು ಮಹಾ ಮೃತ್ಯುಂಜಯ ಹೋಮವು ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಲಿದೆ.

ಮಧ್ಯಾಹ್ನ 12-00 ಗಂಟೆಗೆ ಮಹಾ ಪೂಜೆ,12-30 ಗಂಟೆಗೆ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರಿಂದ ಆಶೀರ್ವಚನ ಹಾಗೂ ಫಲ ಮಂತ್ರಾಕ್ಷತೆ ನಂತರ ಅನ್ನಸಂತರ್ಪಣೆ, ಸಂಜೆ 6-300 ಗಂಟೆಯಿಂದ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರ್ಯ ತಂಡದ ನೇತೃತ್ವದ ಮಕ್ಕಳ ಯಕ್ಷಗಾನ ತಂಡದಿಂದ ಸುದರ್ಶನ ವಿಜಯ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

You may also like

Leave a Comment