Home HISTORYಶ್ರೀ ಕೋದಂಡ ರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಪ್ರಯುಕ್ತ ಸವಣೂರು ಗ್ರಾಮ ಸಮಿತಿ ವತಿಯಿಂದ 160ಕ್ಕಿಂತಲೂ ಅಧಿಕ ಜನರು ಶ್ರೀರಾಮ ನಾಮ ತಾರಕ ಮಂತ್ರದ ದೀಕ್ಷೆ

ಶ್ರೀ ಕೋದಂಡ ರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಪ್ರಯುಕ್ತ ಸವಣೂರು ಗ್ರಾಮ ಸಮಿತಿ ವತಿಯಿಂದ 160ಕ್ಕಿಂತಲೂ ಅಧಿಕ ಜನರು ಶ್ರೀರಾಮ ನಾಮ ತಾರಕ ಮಂತ್ರದ ದೀಕ್ಷೆ

by anamika

ಶ್ರೀ ಕೋದಂಡ ರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಪ್ರಯುಕ್ತ ಸವಣೂರು ಗ್ರಾಮ ಸಮಿತಿ ವತಿಯಿಂದ 160ಕ್ಕಿಂತಲೂ ಅಧಿಕ ಜನರು ಶ್ರೀರಾಮ ನಾಮ ತಾರಕ ಮಂತ್ರದ ದೀಕ್ಷೆ

 

ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಎಪ್ರಿಲ್‌ ತಿಂಗಳಲ್ಲಿ ನಡೆಯುವ ಬ್ರಹ್ಮಕಲಶದ ಅಂಗವಾಗಿ ಶ್ರೀ ರಾಮ ಹನುಮ ಜ್ಯೋತಿ ರಥಯಾತ್ರೆ, ಲಕ್ಷೋತ್ತರ ನಾರಿಕೇಳ ಸಮರ್ಪಣಾ ಯಜ್ಞಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ಇದರ ಸವಣೂರು ಗ್ರಾಮ ಸಮಿತಿ ವ್ಯಾಪ್ತಿಗೆ ಒಳಪಡುವ ಸವಣೂರು , ಪುಣ್ಚಪ್ಪಾಡಿ, ಪಾಲ್ತಾಡಿ ಗ್ರಾಮದ 160ಕ್ಕಿಂತಲೂ ಅಧಿಕ ಜನರು ರಾಮ ತಾರಕ ದೀಕ್ಷೆಯನ್ನು ಪಡಕೊಂಡಿರುತ್ತಾರೆ.

ಎಪ್ರಿಲ್‌ 22 ರಂದು ಪುಣ್ಚಪ್ಪಾಡಿ ಗ್ರಾಮದ ಗೌರಿಸದನದಲ್ಲಿ ಸಾಮೂಹಿಕ ಶ್ರೀ ರಾಮ ತಾರಕ ಮಂತ್ರ ನಡೆಯಲಿದೆ. ಈ ಸಂದರ್ಭದಲ್ಲಿ ಸವಣೂರು ಗ್ರಾಮ ಸಮಿತಿಯ ಅಧ್ಯಕ್ಷರಾದ ಮಹೇಶ್‌ ಕೆ ಸವಣೂರು , ಪ್ರಧಾನ ಕಾರ್ಯದರ್ಶಿ ತಾರನಾಥ ಕಾಯರ್ಗ, ಜಪಯಜ್ಞ ಸಮಿತಿ ಸಂಚಾಲಕರಾದ ಗಿರಿಶಂಕರ ಸುಲಾಯ, ಸಹಸಂಚಾಲಕರಾದ ಭರತ್‌ ರೈ ಪಾಲ್ತಾಡಿ , ಲಿಂಗಪ್ಪ ರೈ ಚೆಂಬುತ್ತೋಡಿ, ರಥಯಾತ್ರ ಸಮಿತಿಯ ಸಂಚಾಲಕರಾದ ಚೇತನ್‌ ಕುಮಾರ್‌ ಕೋಡಿಬೈಲು, ಲಕ್ಷೋತ್ತರ ನಾರಿಕೇಳ ಗ್ರಾಮ ಸಹಸಂಚಾಲಕರಾದ ಪುಟ್ಟಣ್ಣ ಗೌಡ ಬದಿಯಡ್ಕ, ಭಜನಾ ಸಮಿತಿ ಸಹ ಸಂಚಾಲಕರಾದ ಶಿವರಾಮ ಗೌಡ ಮೆದು, ಜಯಶ್ರೀ ಕುಚ್ಚೆಜಾಲು, ಮಹಿಳಾ ಸಮಿತಿಯ ಸಂಚಾಲಕರಾದ ಇಂದಿರಾ ಬಿ ಕೆ, ಸಹಸಂಚಾಲಕರಾದ ಆಶಾ ರೈ ಕಲಾಯಿ, ಸಾಮಾಜಿಕ ಜಾಲತಾಣದ ಸಂಚಾಲಕರಾದ ಸತೀಶ್‌ ಬಲ್ಯಾಯ, ಪ್ರಮುಖರಾದ ರಾಜೇಶ್‌ ರೈ ಮೊಗರು, ಗಂಗಾಧರ ಸುಣ್ಣಾಜೆ , ಸಂಜೀವ ಗೌಡ ಪಾಲ್ತಾಡಿ , ಕರುಣಾಕರ ಗೌಡ ಪಲ್ಲತ್ತಡ್ಕ, ರಾಜೇಶ್‌ ಕೆಳಗಿನಮನೆ, ರಾಜೇಶ್ವರಿ ಕನ್ಯಾಮಂಗಲ, ಶೇಷಮ್ಮ ನೂಜಾಜೆ, ಪ್ರಕಾಶ್‌ ರೈ ಸಾರಕರೆ, ಪ್ರಶಾಂತ್‌ ಗುಂಡ್ಯಡ್ಕ, ಅನ್ನಪೂರ್ಣ ಪ್ರಸಾದ್‌ ರೈ ಬೈಲಾಡಿ, ಪ್ರವೀಣ್‌ ಬಂಬಿಲದೋಳ, ಈಶ್ವರ ಮಂಜುನಾಥನಗರ, ಸತ್ಯಪ್ರಕಾಶ್‌ ಮಂಜುನಾಥನಗರ, ಸಂತೋಷ್‌ ರೈ ಮಂಜುನಾಥನಗರ ಮೊದಲಾದವರು ಉಪಸ್ಥಿತರಿದ್ದರು.

You may also like

Leave a Comment