Home Uncategorizedದುಗ್ಗಲಡ್ಕ : ವಿಜೃಂಭಣೆಯಿಂದ ನಡೆದ ಶ್ರೀದುಗ್ಗಲಾಯ ದೈವದ ನೇಮೋತ್ಸವ

ದುಗ್ಗಲಡ್ಕ : ವಿಜೃಂಭಣೆಯಿಂದ ನಡೆದ ಶ್ರೀದುಗ್ಗಲಾಯ ದೈವದ ನೇಮೋತ್ಸವ

by anamika

ದುಗ್ಗಲಡ್ಕ : ವಿಜೃಂಭಣೆಯಿಂದ ನಡೆದ ಶ್ರೀದುಗ್ಗಲಾಯ ದೈವದ ನೇಮೋತ್ಸವ

 

ಗುಳಿಗ ದೈವದ ನೇಮೋತ್ಸವ

ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವದ ಅಂಗವಾಗಿ ನಿನ್ನೆ ಪ್ರಧಾನವಾದ ಶ್ರೀ ದುಗ್ಗಲಾಯ ದೈವದ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆಯಿಂದ ಆರಂಭಗೊಂಡ ಶ್ರೀ ದುಗ್ಗಲಾಯ ದೈವದ ನೇಮೋತ್ಸವ ಮಧ್ಯಾಹ್ನ ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ ನಡೆದು, ಸಂಜೆ ನಡುಬೆಟ್ಟು ಚಾವಡಿಗೆ ಭಂಡಾರ ಹಿಂತಿರುಗುವುದರೊಂದಿಗೆ ಜಾತ್ರೋತ್ಸವ ಸಂಪನ್ನ ಗೊಂಡಿತು. ನೇಮೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆ, ಅಧ್ಯಕ್ಷ ಕುಶಾಲಪ್ಪ ಗೌಡ ಕಜೆ, ಗೌರವಾಧ್ಯಕ್ಷ ಸುಂದರ ರಾವ್, ಕಾರ್ಯದರ್ಶಿ ಶೇಖರ ಕುದ್ಪಾಜೆ, ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ರೈ, ಯುವ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ನಾಯ್ಕ್, ಮಾಜಿ ನ.ಪಂ.ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ.ನೀರಬಿದಿರೆ, ಮಾಜಿ ಸದಸ್ಯ ಬಾಲಕೃಷ್ಣ ರೈ ಸಹಿತ ಸಮಿತಿಗಳ ಸದಸ್ಯರು, ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

 

ಇಂದು (ಮಾ.21)ದುಗ್ಗಲಾಯ ದೈವಸ್ಥಾನದ ಆಡಳಿತಕ್ಕೆ ಒಳಪಟ್ಟ ಕೆ.ಎಫ್.ಡಿ.ಸಿ. ರಬ್ಬರ್ ತೋಟದ ಒಳಗಿರುವ ಕಟ್ಟೆಯಲ್ಲಿ ಗುಳಿಗ ದೈವದ ನೇಮೋತ್ಸವ ನಡೆಯಲಿದೆ.

You may also like

Leave a Comment