Home Uncategorizedಮುಳ್ಳುಬಾಗಿಲಿನಲ್ಲಿ ಮಾ.29-30ರಂದು ಶ್ರೀ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ

ಮುಳ್ಳುಬಾಗಿಲಿನಲ್ಲಿ ಮಾ.29-30ರಂದು ಶ್ರೀ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ

by anamika

ಮುಳ್ಳುಬಾಗಿಲಿನಲ್ಲಿ ಮಾ.29-30ರಂದು ಶ್ರೀ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ

ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಪ್ರದೇಶದಲ್ಲಿ ಮಾರ್ಚ್ 29 ಮತ್ತು 30ರಂದು ಶ್ರೀ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವವು ಭಕ್ತಿಭಾವದಿಂದ ಹಾಗೂ ಸಡಗರ ಸಂಭ್ರಮದೊಂದಿಗೆ ನಡೆಯಲಿದೆ.

ಎರಡು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಉತ್ಸವದಲ್ಲಿ ವಿವಿಧ ಹೋಮ-ಹವನಗಳು, ಸಾಂಪ್ರದಾಯಿಕ ಪೂಜಾ ವಿಧಿಗಳು ಮತ್ತು ವಿಶೇಷ ಸೇವೆಗಳು ಜರುಗಲಿವೆ.

ಮಾರ್ಚ್ 29 (ಭಾನುವಾರ):
ಸಂಜೆ 7:00 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸುದರ್ಶನ ಹೋಮ, ವಾಸ್ತು ಹೋಮ, ಆವಾಹನೆ, ಭಾದಾ ಉಚ್ಚಾಟನೆ, ರಕ್ಷೋಘ್ನ ಹೋಮ ಹಾಗೂ ವಾಸ್ತು ಪೂಜೆ ನಡೆಯಲಿದೆ. ನಾಗದೇವರ ಸಾನ್ನಿಧ್ಯದಲ್ಲಿ ಆಶ್ಲೇಷ ಬಲಿ ಸೇವೆ ಜರುಗಲಿದೆ. ರಾತ್ರಿ 9:00 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿದೆ.

ಮಾರ್ಚ್ 30 (ಸೋಮವಾರ):
ಬೆಳಿಗ್ಗೆ 8:00 ಗಂಟೆಯಿಂದ ಗಣಹೋಮ, ಕಲಶಪೂಜೆ ಸೇರಿದಂತೆ ಪ್ರಮುಖ ವಿಧಿವಿಧಾನಗಳು ನಡೆಯಲಿದ್ದು, ಶ್ರೀ ದೈವಗಳ ಹಾಗೂ ನಾಗದೇವರ ಪುನರ್ ಪ್ರತಿಷ್ಠೆ ನೆರವೇರಲಿದೆ. ಬಳಿಕ ದೈವಗಳಿಗೆ ತಂಬಿಲ ಸೇವೆ ಸಲ್ಲಿಸಲಾಗುತ್ತದೆ. ಮಧ್ಯಾಹ್ನ 12:00ಕ್ಕೆ ಪ್ರಸಾದ ವಿತರಣೆ ಮತ್ತು 12:30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ಮಂಗಳಗೊಳ್ಳಲಿದೆ.

ಕ್ಷೇತ್ರದ ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

You may also like

Leave a Comment