44
ಮೆಸ್ಕಾಂ ವಿಶೇಷ ಕಂದಾಯ ವಸೂಲಾತಿ ಅಭಿಯಾನ: ರಜಾದಿನಗಳಲ್ಲೂ ಕ್ಯಾಶ್
ಪುತ್ತೂರು: ಮೆಸ್ಕಾಂ ಪುತ್ತೂರು ಗ್ರಾಮಾಂತರ ಉಪವಿಭಾಗದ ವತಿಯಿಂದ ವಿಶೇಷ ಕಂದಾಯ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಮಾರ್ಚ್ ಮಾಸಾಂತ್ಯದ ಸಾರ್ವತ್ರಿಕ ರಜಾದಿನಗಳಲ್ಲಿಯೂ ಕುಂಬ್ರ ಕಚೇರಿಯಲ್ಲಿ ಕ್ಯಾಶ್ ಕೌಂಟರ್ ಕಾರ್ಯನಿರ್ವಹಿಸಲಿದೆ.
ಮಾ.28ರ ನಾಲ್ಕನೇ ಶನಿವಾರ, ಮಾ.29ರ ಭಾನುವಾರ ಹಾಗೂ ಮಾ.30ರ ಮಹಾವೀರ ಜಯಂತಿ ದಿನಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30ರವರೆಗೆ ನಗದು ಮುಂಗಟ್ಟೆ ತೆರೆಯಿರುತ್ತದೆ.
ವಿದ್ಯುತ್ ಬಳಕೆದಾರರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಬಾಕಿ ಬಿಲ್‌ಗಳೊಂದಿಗೆ ಮಾರ್ಚ್ 2026ರ ಸಂಪೂರ್ಣ ಬೇಡಿಕೆಯ ಮೊತ್ತವನ್ನು ಪಾವತಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಬಿಲ್ಲು ಪಾವತಿಸದ ಬಳಕೆದಾರರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.