146
ಸುಳ್ಯ ತಾಲೂಕಿನಲ್ಲಿ ಭಾರಿ ಗಾಳಿ-ಮಳೆ: ವಿದ್ಯುತ್ ವ್ಯತ್ಯಯ, ಆಲಿಕಲ್ಲು ಮಳೆ ವರದಿ
ಸುಳ್ಯ: ತಾಲೂಕಿನಾದ್ಯಂತ ಇಂದು ಸಂಜೆ ಅಕಸ್ಮಿಕವಾಗಿ ಭಾರಿ ಗಾಳಿ ಮತ್ತು ಮಳೆಯು ಸುರಿದು ಜನಜೀವನಕ್ಕೆ ತೊಂದರೆ ಉಂಟುಮಾಡಿತು. ದಿನಪೂರ್ತಿ ಉರಿಯುತ್ತಿದ್ದ ಬಿಸಿಲಿನ ತಾಪಕ್ಕೆ ಈ ಮಳೆ ತಂಪು ತಂದಿದೆ.
ಸಂಜೆ ಸುಮಾರು 4.45ರ ಸುಮಾರಿಗೆ ಮಳೆಯು ಪ್ರಾರಂಭವಾಗಿ, ಗಾಳಿಯ ತೀವ್ರತೆ ಹೆಚ್ಚಾಗಿತ್ತು. ಹಲವೆಡೆ ಮರದ ಕೊಂಬೆಗಳು ರಸ್ತೆ ಹಾಗೂ ವಿದ್ಯುತ್ ಲೈನ್‌ಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ವ್ಯತ್ಯಯಗೊಂಡಿದೆ.
ಇದಲ್ಲದೆ, ಗೂನಡ್ಕ ದರ್ಖಾಸ್ತು ಪ್ರದೇಶದಲ್ಲಿ ಬಿರುಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಯೂ ದಾಖಲಾಗಿದೆ. ಸ್ಥಳೀಯರು ಕೆಲವು ಹೊತ್ತಿನ ಕಾಲ ಭೀತಿಯಲ್ಲೇ ಕಾಲ ಕಳೆಯಬೇಕಾಯಿತು.
ಸಂಬಂಧಿಸಿದ ಇಲಾಖೆಗಳು ಹಾನಿ ಪರಿಶೀಲನೆ ಹಾಗೂ ವಿದ್ಯುತ್ ಪುನಃಸ್ಥಾಪನೆ ಕಾರ್ಯಗಳನ್ನು ಆರಂಭಿಸಿರುವುದಾಗಿ ತಿಳಿದುಬಂದಿದೆ.