Home Uncategorizedಇಂದು  ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಪೂರ್ವಭಾವಿ ಸಭೆ 

ಇಂದು  ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಪೂರ್ವಭಾವಿ ಸಭೆ 

by anamika

 ಇಂದು  ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಪೂರ್ವಭಾವಿ ಸಭೆ 

ಸುಳ್ಯ ಸೀಮೆಯ ತೊಡಿಕಾನದಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವರ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆ ಹಂಚಿಕೆ ಹಾಗೂ ಹಸಿರುವಾಣಿ ಸಂಗ್ರಹಣೆ ಕುರಿತು ಪೂರ್ವಭಾವಿ ಸಭೆ ಇಂದು (ಮಾ.30) ಸೋಮವಾರ ತೊಡಿಕಾನ ಗ್ರಾಮದಲ್ಲಿ ನಡೆಯಲಿದೆ.

ಗ್ರಾಮ ಹಾಗೂ ಬೈಲಿಗೆ ಸಂಬಂಧಪಟ್ಟ ಮನೆಯವರು ತಮಗೆ ಸಂಬಂಧಿಸಿದ ಸ್ಥಳಗಳಲ್ಲಿ ಸಭೆಗೆ ಹಾಜರಾಗುವಂತೆ ಜಾತ್ರೋತ್ಸವ ಸಮಿತಿ ವಿನಂತಿಸಿದೆ.

ಸಭೆಗಳ ವಿವರ ಹೀಗಿದೆ:

  • ಪೆತ್ತಾಜೆ – ಶೆಟ್ಯಡ್ಕ – ಮೂಡನಕಜೆ ಭಾಗ
    ಸ್ಥಳ: ಭಾನುಪ್ರಕಾಶ್ ಮೂಡನಕಜೆ ರವರ ಮನೆ
    ಸಮಯ: ಸಂಜೆ 6:00
  • ಮೊಟ್ಟೆಂಗಾರ್ – ಚೂರ್ನಾಡ್ – ಕಲ್ಲಗದ್ದೆ ಭಾಗ
    ಸ್ಥಳ: ಕಲ್ಲಗದ್ದೆ ಆನಂದ್ ರವರ ಮನೆ
    ಸಮಯ: ಸಂಜೆ 7:00
  • ಅಡ್ಯಡ್ಕ ಪೇಟೆ ಭಾಗ
    ಸ್ಥಳ: ನಾಗೇಶ್ ಶೆಟ್ಟಿ ರವರ ಅಂಗಡಿ ಬಳಿ
    ಸಮಯ: ರಾತ್ರಿ 8:00

ಜಾತ್ರೋತ್ಸವದ ಯಶಸ್ವಿ ಆಯೋಜನೆಗಾಗಿ ಎಲ್ಲರೂ ಸಭೆಗೆ ಆಗಮಿಸಿ ಸಹಕರಿಸುವಂತೆ ಸಮಿತಿ ಮನವಿ ಮಾಡಿದೆ.

You may also like

Leave a Comment