Home Uncategorizedವಳಲಂಬೆ ನೇರಳಾಡಿ ಮಲೆ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವ: ಗೊನೆ ಮುಹೂರ್ತ

ವಳಲಂಬೆ ನೇರಳಾಡಿ ಮಲೆ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವ: ಗೊನೆ ಮುಹೂರ್ತ

by anamika

ವಳಲಂಬೆ ನೇರಳಾಡಿ ಮಲೆ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವ: ಗೊನೆ ಮುಹೂರ್ತ

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆ ನೇರಳಾಡಿ ಬದಿಕಾನದಲ್ಲಿ ಪುನರ್ ನಿರ್ಮಾಣಗೊಂಡ ಮಾಡದಲ್ಲಿ ಶ್ರೀ ಮಲೆ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ಮತ್ತು ನೇಮೋತ್ಸವ (ಜಾಲಾಟ) ಏಪ್ರಿಲ್ 1ರಿಂದ 4ರವರೆಗೆ ನಡೆಯಲಿದೆ.

ಈ ಜಾತ್ರೋತ್ಸವದ ಅಂಗವಾಗಿ ಮಾ.29ರಂದು ಗೊನೆ ಮುಹೂರ್ತವನ್ನು ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.

ಜಾತ್ರೋತ್ಸವದ ಅವಧಿಯಲ್ಲಿ ವಿವಿಧ ಧಾರ್ಮಿಕ ಕ್ರಿಯೆಗಳು, ಪೂಜೆಗಳು ಹಾಗೂ ಸಂಪ್ರದಾಯಬದ್ಧ ನೇಮೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ದೇವಸ್ಥಾನ ಸಮಿತಿ ವತಿಯಿಂದ ಅಗತ್ಯ ಸಿದ್ಧತೆಗಳು ಕೈಗೊಳ್ಳಲಾಗಿದೆ.

.

You may also like

Leave a Comment