38
ದುಗ್ಗಲಡ್ಕ: ಭಾಗವತ ಜಯಾನಂದ ಪಾನತ್ತಿಲರಿಗೆ ಸನ್ಮಾನ – ಆಮಂತ್ರಣ ಪತ್ರ ಬಿಡುಗಡೆ
ದುಗ್ಗಲಡ್ಕದ ಕೊಯಿಕುಳಿ ಶ್ರೀ ಕೃಷ್ಣ ಮಂದಿರದ ಶ್ರೀಕೃಷ್ಣ ಸೇವಾ ಸಮಿತಿ ವತಿಯಿಂದ ಹಿರಿಯ ಭಾಗವತ ಜಯಾನಂದ ಪಾನತ್ತಿಲರವರಿಗೆ ಏಪ್ರಿಲ್ 19ರಂದು ನಡೆಯಲಿರುವ ಸನ್ಮಾನ ಸಮಾರಂಭದ ಆಮಂತ್ರಣ ಪತ್ರವನ್ನು ಮಾ.29ರಂದು ಬಿಡುಗಡೆ ಮಾಡಲಾಯಿತು.
ಶಿಕ್ಷಕಿ ಶ್ರೀಮತಿ ಶೈಲಜಾ ಜಯರಾಜ್ ಹಾಗೂ ಜಯರಾಜ್ ನೀರಬಿದಿರೆ ಅವರು ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಶಶಿಧರ ಎಂ.ಜೆ., ಕೋಶಾಧಿಕಾರಿ ಭಾಸ್ಕರ ಪೂಜಾರಿ ಬಾಜಿನಡ್ಕ ಹಾಗೂ ಸದಸ್ಯರಾದ ಲಿಂಗಪ್ಪ ಮೂಡೆಕಲ್ಲು, ತೀರ್ಥರಾಮ ಕೊಯಿಕುಳಿ, ಚಿದಾನಂದ ನಡುಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಏಪ್ರಿಲ್ 19ರಂದು ಬೆಳಿಗ್ಗೆ ಭಜನೆ, ನಂತರ ಸನ್ಮಾನ ಸಮಾರಂಭ ಮತ್ತು ಅಪರಾಹ್ನ ಯಕ್ಷಗಾನ ಬಯಲಾಟ ನಡೆಯಲಿದೆ.