55
ಎಣ್ಮೂರು ಶ್ರೀ ಆದಿಬೈದೇರುಗಳ ನೇಮೋತ್ಸವಕ್ಕೆ ಭಕ್ತಿ ಸಂಭ್ರಮದ ಚಾಲನೆ
ದಕ್ಷಿಣ ಕನ್ನಡ ಜಿಲ್ಲೆಯ ಎಣ್ಮೂರು ಕಟ್ಟಬೀಡಿನಲ್ಲಿ ನಡೆಯುವ ಶ್ರೀ ಆದಿಬೈದೇರುಗಳ ನೇಮೋತ್ಸವವು ಏಪ್ರಿಲ್ 1ರಿಂದ ಭಕ್ತಿ ಭಾವದಿಂದ ಜರುಗಲಿದ್ದು, ಈಗಾಗಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿವೆ.
ಸುಗ್ಗಿ ತಿಂಗಳ ಪೂರ್ವದಲ್ಲಿ ನಡೆಯುವ ಈ ವಾರ್ಷಿಕ ನೇಮೋತ್ಸವದ ಅಂಗವಾಗಿ ಮಾರ್ಚ್ 25ರಿಂದ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿದೆ. ಉಳ್ಳಾಕ್ಕುಳ ಬೀಡಿನಲ್ಲಿ ತಂಬಿಲ ಹಾಗೂ ಗರಡಿಯಲ್ಲಿ ಗೊನೆ ಕಡಿಯುವ ಸಂಪ್ರದಾಯದ ಮೂಲಕ ಹಬ್ಬದ ಶುಭಾರಂಭ ನಡೆದಿದೆ.
ಮಾರ್ಚ್ 30 ಮತ್ತು 31ರಂದು ಶ್ರೀ ಉಳ್ಳಾಕುಳ ಹಾಗೂ ಇಷ್ಟ ದೇವತೆಗಳ ನೇಮೋತ್ಸವಗಳು ನಡೆಯಲಿದ್ದು, ಭಕ್ತರಿಗೆ ಸಾರ್ವಜನಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.
ಏಪ್ರಿಲ್ 1ರಂದು ನಡೆಯುವ ಮುಖ್ಯ ನೇಮೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಸಾಂಪ್ರದಾಯಿಕ ಆಚರಣೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳು ವೈಭವದಿಂದ ನೆರವೇರಲಿವೆ.