Home Uncategorizedನಿಡ್ವಾಳದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಭಾರಿ ಸಿದ್ಧತೆ: ಮನೆ ಮನೆಗೆ ಆಮಂತ್ರಣ ವಿತರಣೆ

ನಿಡ್ವಾಳದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಭಾರಿ ಸಿದ್ಧತೆ: ಮನೆ ಮನೆಗೆ ಆಮಂತ್ರಣ ವಿತರಣೆ

by anamika

ನಿಡ್ವಾಳದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಭಾರಿ ಸಿದ್ಧತೆ: ಮನೆ ಮನೆಗೆ ಆಮಂತ್ರಣ ವಿತರಣೆ

ನಿಡ್ವಾಳ: ತುಳುನಾಡಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾವಿಷ್ಣು ದೇವಳದ ಪುನರ್ ನಿರ್ಮಾಣ ಹಾಗೂ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಭಕ್ತಿಭಾವದಿಂದ ಸಿದ್ಧತೆಗಳು ಜೋರಾಗಿವೆ. ಏಪ್ರಿಲ್ 24ರಿಂದ ಮೇ 2ರವರೆಗೆ ನಡೆಯಲಿರುವ ಈ ಮಹೋತ್ಸವಕ್ಕೆ ಈಗಾಗಲೇ ವ್ಯಾಪಕ ಆಮಂತ್ರಣ ಕಾರ್ಯಗಳು ಆರಂಭಗೊಂಡಿವೆ.

 

ತುಳುನಾಡಿನ ಅವಳಿ ವೀರ ಸಹೋದರರಾದ ಕೋಟಿ-ಚೆನ್ನಯರು ಆರಾಧಿಸುತ್ತಿದ್ದ ಪ್ರಾಚೀನ ದೇವಾಲಯವೆಂಬ ವಿಶೇಷತೆ ಹೊಂದಿರುವ ನಿಡ್ವಾಳ ಕರಿಕಳದ ಶ್ರೀ ಮಹಾವಿಷ್ಣು ದೇವಳವು ಭಕ್ತರ ಆಶೆಗಳ ನೆರವೇರಿಸುವ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆ ಬ್ರಹ್ಮಕಲಶೋತ್ಸವಕ್ಕೆ ಭಕ್ತರ ಉತ್ಸಾಹ ಹೆಚ್ಚಾಗಿದೆ.

ಮಹೋತ್ಸವದ ಅಂಗವಾಗಿ ಅನೇಕ ತಂಡಗಳನ್ನು ರಚಿಸಿ, ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನೂರಾರು ಭಕ್ತರು ಊರು-ಪರವೂರಿನಲ್ಲಿ ಮನೆ ಮನೆಗೆ ತೆರಳಿ ಆಮಂತ್ರಣ ಪತ್ರಿಕೆ ವಿತರಣೆ ಹಾಗೂ ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ. ಏಪ್ರಿಲ್ 5ರಿಂದ ಈ ಕಾರ್ಯ ಮತ್ತಷ್ಟು ವೇಗ ಪಡೆದಿದ್ದು, ನಿರಂತರವಾಗಿ ನಡೆಯುತ್ತಿದೆ.

 

ಬ್ರಹ್ಮಕಲಶೋತ್ಸವದ ದಿನಗಳಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಪೂಜೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

You may also like

Leave a Comment