Home Uncategorizedಮಂಗಳೂರು: ಏಪ್ರಿಲ್ 9ರಂದು ನೇರ ಸಂದರ್ಶನ – ವಿವಿಧ ಹುದ್ದೆಗಳಿಗೆ ಉದ್ಯೋಗಾವಕಾಶ

ಮಂಗಳೂರು: ಏಪ್ರಿಲ್ 9ರಂದು ನೇರ ಸಂದರ್ಶನ – ವಿವಿಧ ಹುದ್ದೆಗಳಿಗೆ ಉದ್ಯೋಗಾವಕಾಶ

by anamika

ಮಂಗಳೂರು: ಏಪ್ರಿಲ್ 9ರಂದು ನೇರ ಸಂದರ್ಶನ – ವಿವಿಧ ಹುದ್ದೆಗಳಿಗೆ ಉದ್ಯೋಗಾವಕಾಶ

ಮಂಗಳೂರು: ಸ್ಥಳೀಯ ಖಾಸಗಿ ಸಂಸ್ಥೆಗಳಾದ ಎಕ್ಸ್‌ಪರ್ಟ್ ಕಾಲೇಜು ಹಾಗೂ ಕೆ.ಎನ್.ಎನ್.ಡಿ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ.

ಏಪ್ರಿಲ್ 9ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಡೀಲ್ ಪ್ರಜಾ ಸೌಧದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಈ ಸಂದರ್ಶನ ನಡೆಯಲಿದೆ.

ಸರ್ವಿಸ್ ಪ್ರೊಜೆಕ್ಟ್ ಇಂಜಿನಿಯರ್, ಪ್ರಾಜೆಕ್ಟ್ ಇಂಜಿನಿಯರ್, ಸರ್ವಿಸ್ ಇಂಜಿನಿಯರ್, ಸರ್ವಿಸ್ ಟೆಕ್ನಿಶಿಯನ್, ಸಿಸ್ಟಮ್ ಆಪರೇಟರ್, ಫುಡ್ ಕುಕ್, ಹೆವಿ ವೆಹಿಕಲ್ ಡ್ರೈವರ್, ಮೆಕ್ಯಾನಿಕಲ್ ಟೆಕ್ನಿಶಿಯನ್, ಸೇಲ್ಸ್ ಮಾರ್ಕೆಟಿಂಗ್, ವೇರ್‌ಹೌಸ್ ಅಸೋಸಿಯೇಟ್ಸ್, ಬ್ಯುಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್, ಸೀನಿಯರ್ ವೇರ್‌ಹೌಸ್ ಅಸೋಸಿಯೇಟ್ಸ್, ಆಫೀಸ್ ಎಕ್ಸಿಕ್ಯೂಟಿವ್, ಹಾಸ್ಟೆಲ್ ವಾರ್ಡನ್ ಹಾಗೂ ಸ್ಟಡಿ ಇನ್ವಿಜಿಲೇಟರ್ ಸೇರಿದಂತೆ ಅನೇಕ ಹುದ್ದೆಗಳು ಖಾಲಿ ಇವೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ ಅಥವಾ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು.

ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ-ವಿವರಗಳಿರುವ ಬಯೋಡೇಟಾ ಜೊತೆಗೆ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

Leave a Comment