ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಸವಣೂರಿಗೆ ಆಗಮನ-ಭವ್ಯ ಸ್ವಾಗತ
ಸವಣೂರು ಹನುಮಗಿರಿ ಶ್ರೀ ಕೋದಂಡ ರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಅಯೋಧ್ಯೆ ಹಾಗೂ ಆಂಜನಾದ್ರಿಯಿಂದ ಹೊರಟ ಶ್ರೀ ರಾಮ ಹನುಮ ಜ್ಯೋತಿ ರಥಯಾತ್ರೆಯು ಏ 6 ರಂದು ಬೆಳಿಗ್ಗೆ ಸವಣೂರಿಗೆ ಪ್ರವೇಶ ಮಾಡಿತು.ಜಿನ ಬಸದಿಯ ಪ್ರವೇಶ ದ್ವಾರದಲ್ಲಿ ರಥಯಾತ್ರೆಗೆ ಭವ್ಯ ಪುಷ್ಪಾರ್ಚಾನೆಯಿಂದ ಸ್ವಾಗತ ಕೋರಲಾಯಿತು. ಪೂರ್ಣಕುಂಭ ಭಜನೆ, ಮಂಗಳವಾದ್ಯ ಹಾಗೂ ಚೆಂಡೆಯ ಮೂಲಕ ಭವ್ಯ ರಥಯಾತ್ರೆಯು ಜಿನ ಬಸದಿಗೆ ಸಾಗಿ ಬಂದು ಜಿನ ಬಸದಿಯ ಅರ್ಚಕರಾದ ಶ್ರೇಯಾಂಸ್ ಕುಮಾರ್ ಇಂದ್ರ ರಥಕ್ಕೆ ಆರತಿ ಬೆಳಗಿಸಿದರು,ನಂತರ ಜಿನಬಸದಿಗೆ ಬಂದು ಪದ್ಮಾವತಿ ದೇವಿಗೆ ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಹನುಮಗಿರಿ ಬಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಕೋಟಿ ಶ್ರೀ ರಾಮ ತಾರಕ ಜಪಯಜ್ಞದ ಸಂಚಾಲಕರಾದ ಸೀತಾರಾಮ ರೈ ಕೆದಂಬಾಡಿಗುತ್ತು ಬಹ್ಮಕಲಶದ ಬಗ್ಗೆ ಮಾಹಿತಿ ನೀಡಿದರು,ಅವರಿಗೆ ಸವಣೂರು ಗ್ರಾಮ ಸಮಿತಿ ವತಿಯಿಂದ ದೇವಿಯ ಪ್ರಸಾದ ಶಾಲು ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಹನುಮಗಿರಿ ಬಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ, ಸವಣೂರು ಗ್ರಾಮ ಸಮಿತಿಯ ಅಧ್ಯಕ್ಷರಾದ ಮಹೇಶ್ ಕೆ ಸವಣೂರು, ಪ್ರಧಾನ ಕಾರ್ಯದರ್ಶಿ ತಾರನಾಥ ಕಾಯರ್ಗ, ಜಪಯಜ್ಞ ಸಮಿತಿಯ ಸಂಚಾಲಕರಾದ ಗಿರಿಶಂಕರ ಸುಲಾಯ, ಸಹಸಂಚಾಲಕರಾದ ಭರತ್ ರೈ ಪಾಲ್ತಾಡಿ, ಲಿಂಗಪ್ಪ ರೈ ಚೆಂಬುತ್ತೋಡಿ, ರಥಯಾತ್ರಾ ಸಮಿತಿಯ ಸಂಚಾಲಕರಾದ ಚೇತನ್ ಕುಮಾರ್ ಕೋಡಿಬೈಲು, ಸಹಸಂಚಾಲಕರಾದ ಪ್ರಭಾಕರ ಶೆಟ್ಟಿ ನಡುಬೈಲು, ಸಾಮಾಜಿಕ ಜಾಲತಾಣದ ಸಂಚಾಲಕರಾದ ಸತೀಶ್ ಬಲ್ಯಾಯ, ಲಕ್ಷೋತ್ತರ ನಾರಿಕೇಳ ಗ್ರಾಮ ಸಂಚಾಲಕರಾದ ಗಂಗಾಧರ ಪೆರಿಯಡ್ಕ, ಸಹ ಸಂಚಾಲಕರಾದ ಪುಟ್ಟಣ್ಣ ಗೌಡ ಬದಿಯಡ್ಕ, ಸಹಸಂಚಾಲಕರಾದ ರಾಮಕೃಷ್ಣ ಪ್ರಭು, ಭಜನಾ ಸಮಿತಿಯ ಸಂಚಾಲಕರಾದ ರಾಜೇಶ್ ಇಡ್ಯಾಡಿ, ಸಹಸಂಚಾಲಕರಾದ ಶಿವರಾಮ ಗೌಡ ಮೆದು, ಮಹಿಳಾ ಸಮಿತಿಯ ಸಹಸಂಚಾಲಕರಾದ ಆಶಾ ರೈ ಕಲಾಯಿ, ಹನುಮಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಸುರೇಶ್ ರೈ ಸೂಡಿಮುಳ್ಳು, ನಾಟಿವೈದ್ಯ ವಾಸುದೇವ ಇಡ್ಯಾಡಿ, ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರಾದ ಚಂದ್ರಾವತಿ ಸುಣ್ಣಾಜೆ, ತೀರ್ಥರಾಮ ಕೆಡೆಂಜಿ, ಹರಿಕಲಾ ರೈ ಕುಂಜಾಡಿ, ರಾಜೀವಿ ರೈ ಕೆಡೆಂಜಿ, ರಾಜೇಶ್ ರೈ ಮೊಗರು, ಬಾಳಪ್ಪ ಪೂಜಾರಿ ಬಂಬಿಲದೋಳ, ಸಂಜೀವ ಗೌಡ ಪಾಲ್ತಾಡಿ, ಜಯರಾಮ ರೈ ಸೋಂಪಾಡಿ, ಜಗದೀಶ್ ಇಡ್ಯಾಡಿ, ಡಾ| ಸುಬ್ರಹ್ಮಣ್ಯ ಭಟ್ ಬರೆಪ್ಪಾಡಿ, ನಾರಾಯಣ ಗೌಡ ಪೂವ, ವಿಠಲ ಶೆಟ್ಟಿ ಕೆಡೆಂಜಿ, ಸುಪ್ರೀತ್ ರೈ ಖಂಡಿಗ, ಕೀರ್ತನ್ ಕೋಡಿಬೈಲು, ಗಂಗಾಧರ ಸುಣ್ಣಾಜೆ, ಶ್ರೀಧರ ಸುಣ್ಣಾಜೆ, ಚಂದ್ರಶೇಖರ ಮೆದು, ಅನ್ನಪೂರ್ಣಪ್ರಸಾದ್ ಬೈಲಾಡಿ, ಸೂರಪ್ಪ ಗೌಡ ಬದಿಯಡ್ಕ, ಬಾಬು ಗೌಡ ಅಮೈ, ಆನಂದ ಇಡ್ಯಾಡಿ, ಬಾಲಚಂದ್ರ ರೈ ಕೆರೆಕ್ಕೋಡಿ, ಬಾಲಚಂದ್ರ ಕನ್ನಡಕುಮೇರು, ಮೂಡಂಬೈಲು ಜಯರಾಮ ರೈ, ವಿಠಲ ಶೆಟ್ಟಿ ಬಂಬಿಲ, ಲೋಕಯ್ಯ ಗೌಡ ಅಂಗಡಿಮೂಲೆ, ದುರ್ಗಾಪ್ರಸಾದ್ ಕಲ್ಪತರು, ಪ್ರಕಾಶ್ ಮಾಲೆತ್ತಾರು, ದಯಾನಂದ ಮೆದು ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
