Home Uncategorizedಏಪ್ರಿಲ್ 10ರಿಂದ ಟೋಲ್‌ಗಳಲ್ಲಿ ನಗದು ಪಾವತಿ ಬಂದ್: National Highways Authority of India ಮಹತ್ವದ ನಿರ್ಧಾರ

ಏಪ್ರಿಲ್ 10ರಿಂದ ಟೋಲ್‌ಗಳಲ್ಲಿ ನಗದು ಪಾವತಿ ಬಂದ್: National Highways Authority of India ಮಹತ್ವದ ನಿರ್ಧಾರ

by anamika

ಏಪ್ರಿಲ್ 10ರಿಂದ ಟೋಲ್‌ಗಳಲ್ಲಿ ನಗದು ಪಾವತಿ ಬಂದ್

National Highways Authority of India ಮಹತ್ವದ ನಿರ್ಧಾರ

 

ನವದೆಹಲಿ: ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಮತ್ತು ಮಹತ್ವದ ಸೂಚನೆ ನೀಡಿವೆ. ದೇಶದ ಎಲ್ಲಾ ಟೋಲ್ ಪ್ಲಾಜಾಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ, ಇದೇ ಏಪ್ರಿಲ್ 10ರಿಂದ ಟೋಲ್ ಬೂತ್‌ಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ.

ಹಲವು ವರ್ಷಗಳಿಂದ ಕಡ್ಡಾಯಗೊಳಿಸಿದ್ದರೂ, ಕೆಲವೆಡೆಗಳಲ್ಲಿ ನಗದು ಪಾವತಿ ಇನ್ನೂ ಮುಂದುವರಿದಿತ್ತು. ಇದೀಗ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿ, ಟೋಲ್ ಬೂತ್‌ಗಳಲ್ಲಿ ಕಾಯುವ ಸಮಯವನ್ನು ಶೂನ್ಯಕ್ಕೆ ಇಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಏಪ್ರಿಲ್ 10ರ ನಂತರ ಟೋಲ್ ಪ್ಲಾಜಾಗಳಲ್ಲಿ ನಗದು ಸ್ವೀಕಾರ ಇರುವುದಿಲ್ಲ. ಫಾಸ್ಟ್‌ಟ್ಯಾಗ್ ಇಲ್ಲದ ಅಥವಾ ಅದರಲ್ಲಿ ಬ್ಯಾಲೆನ್ಸ್ ಇಲ್ಲದ ವಾಹನಗಳಿಗೆ ಯುಪಿಐ ಮೂಲಕ ಪಾವತಿಸುವ ಪರ್ಯಾಯ ವ್ಯವಸ್ಥೆ ಒದಗಿಸಲಾಗಿದೆ. ಆದರೆ, ಯುಪಿಐ ಮೂಲಕ ಪಾವತಿ ಮಾಡುವವರಿಗೆ ಶೇಕಡಾ 25 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ಉದಾಹರಣೆಗೆ, ಟೋಲ್ ಶುಲ್ಕ ₹100 ಇದ್ದಲ್ಲಿ, ಯುಪಿಐ ಮೂಲಕ ಪಾವತಿಸಿದರೆ ₹125 ಪಾವತಿಸಬೇಕಾಗುತ್ತದೆ. ಹೀಗಾಗಿ ವಾಹನ ಸವಾರರು ಫಾಸ್ಟ್‌ಟ್ಯಾಗ್ ಅನ್ನು ಬಳಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಈ ಕ್ರಮದಿಂದ ಟೋಲ್ ಸಂಗ್ರಹಣೆ ವ್ಯವಸ್ಥೆ ವೇಗವಾಗಿ, ಪಾರದರ್ಶಕವಾಗಿ ಮತ್ತು ತಂತ್ರಜ್ಞಾನಾಧಾರಿತವಾಗಿ ರೂಪುಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

You may also like

Leave a Comment