Home UncategorizedDL, RC ಕಳೆದುಕೊಂಡಿರಾ? ಫೈನ್ ಭಯ ಬೇಡ – ಮೊಬೈಲ್‌ನಲ್ಲೇ ಸುಲಭ ಪರಿಹಾರಇಲ್ಲಿದೆ ಸರಳ ಮಾರ್ಗ  

DL, RC ಕಳೆದುಕೊಂಡಿರಾ? ಫೈನ್ ಭಯ ಬೇಡ – ಮೊಬೈಲ್‌ನಲ್ಲೇ ಸುಲಭ ಪರಿಹಾರಇಲ್ಲಿದೆ ಸರಳ ಮಾರ್ಗ  

by anamika

DL, RC ಕಳೆದುಕೊಂಡಿರಾ? ಫೈನ್ ಭಯ ಬೇಡ – ಮೊಬೈಲ್‌ನಲ್ಲೇ ಸುಲಭ ಪರಿಹಾರ

ಇಲ್ಲಿದೆ ಸರಳ ಮಾರ್ಗ

 

ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ RC ಕಳಕೊಂಡ್ರೆ ಪೊಲೀಸರು ಫೈನ್ ಹಾಕುವಂತೆ ಇಲ್ಲ? ಮೊಬೈಲ್ ಬಳಸಿ ಡೂಪ್ಲಿಕೇಟ್ DL RC ಮನೆಗೆ ಬರುವಂತೆ ಮಾಡಬಹುದು? ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಡ್ರೈವಿಂಗ್ ಲೈಸನ್ಸ್ (DL) ಮತ್ತೆ ವಾಹನ ನೋಂದಣಿ (RC) ಕಳಕೊಂಡ ಕೂಡಲೆ ಗಾಬರಿ ಆಗುವವರೇ ಹೆಚ್ಚು. ಪೊಲೀಸರು ಹಿಡಿದರೆ ಎಲ್ಲಾದರೂ ಫೈನ್ ಹಾಕಿ ಬಿಡ್ತಾರೋ ಎಂಬ ಭಯ ಒಂದು ಕಡೆ ಆದರೆ. ಮತ್ತೆ ಪೊಲೀಸ್ ಸ್ಟೇಷನ್ ಹೋಗಿ ಲಾಸ್ಟ್ ರಿಪೋರ್ಟ್ ಮಾಡಬೇಕು ಅದೊಂದು ತಲೆಬಿಸಿ. ಜನರು ಪೊಲೀಸ್ ಸ್ಟೇಷನ್ ಮೆಟ್ಟಿಲು ಇರುವುದು ಎಂದರೆ ಭಯ ನೋಡಿ. ಅದು ಸಣ್ಣದೆ ಕೆಲಸ ಇರಬಹುದು ಆದರೆ ಅದೊಂತರ ಮುಜುಗರ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವುದು ಎಂದರೆ. ಆದರೆ ನಮ್ಮ ದೇಶ ಕೂಡ ತಂತ್ರಜ್ಞಾನದಲ್ಲಿ ಎಷ್ಟು ಮುಂದುವರೆದಿದೆ ಎಂದರೆ ಈಗ ನಾವು ಎಲ್ಲವನ್ನೂ ಮೊಬೈಲ್ ನಲ್ಲೆ ಮಾಡಬಹುದು. ಅದಕ್ಕೆ ಹೇಳುವುದು ಜಗತ್ತು ಈಗ ಅಂಗೈ ಅಲ್ಲಿದೆ ಅಂತ. ಹಾಗಾದರೆ ಇದನ್ನು ಹೇಗೆ ಮಾಡುವುದು? ನಾವು ಅನುಸರಿಸಬೇಕಾದ ವಿಧಾನಗಳು ಏನು ಎಂಬುವುದನ್ನು ತಿಳಿಯೋಣ.

ಕರ್ನಾಟಕ ಸರ್ಕಾರದ ಟ್ರಾಫಿಕ್ ವಿಭಾಗದ ಅಧಿಕಾರಿಯೊಬ್ಬರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ಅಲ್ಲಿ ಹಂಚಿಕೊಂಡ ವಿಡಿಯೋ ಪ್ರಕಾರ ಈಗ ನಾವು ಮೊಬೈಲ್ ಬಳಸಿಕೊಂಡು ಇದರ ಪರಿಹಾರ ಕಂಡುಕೊಳ್ಳಬಹುದು. ನಮ್ಮ DL ಯಾ RC ಕಳಕೊಂಡ ಕೂಡಲೆ ನಾವು ಮೊಬೈಲ್ ಅಲ್ಲಿ KSP ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ E-Lost ರಿಪೋರ್ಟ್ ಅನ್ನು ರಿಜಿಸ್ಟರ್ ಮಾಡಬೇಕು. ಕೇವಲ 2 ನಿಮಿಷ ಸಮಯದಲ್ಲಿ ನಿಮಗೆ E-Lost ರಿಪೋರ್ಟ್ ಮೊಬೈಲ್ ಅಲ್ಲಿ ಡೌನ್ಲೋಡ್ ಮಾಡಬಹುದು. ಪೊಲೀಸ್ ಅವರು ನಿಮ್ಮನ್ನು ನಿಲ್ಲಿಸಿದಾಗ ಇದನ್ನು ತೋರಿಸಿದರೆ ನಿಮಗೆ ಯಾವುದೇ ದಂಡ ಬೀಳುವುದಿಲ್ಲ. ಇದರ ಜೊತೆಗೆ ನೀವು ಡೂಪ್ಲಿಕೇಟ್ DL ಮತ್ತೆ RC ಗೆ ಅಪ್ಲೈ ಮಾಡಿರುವ ಪುರಾವೆ ತೋರಿಸಿದರೆ ಆಯ್ತು.

 

ಹಾಗಾದರೆ ಈಗ ಪೊಲೀಸ್ ಕಂಪ್ಲೇಂಟ್ ರಿಜಿಸ್ಟರ್ ಮಾಡಿದ್ದನ್ನು ಬಳಸಿಕೊಂಡು RTO ದಲ್ಲಿ ಡೂಪ್ಲಿಕೇಟ್ ಗೆ ಅಪ್ಲೈ ಮಾಡಬೇಕು. ಮೊದಲೆಲ್ಲ ನಾವೇ ಕುದ್ದು ಹೋಗಿ ಮಾಡಬೇಕಿತ್ತು. ಆಗ ಕೆಲವೊಂದು ಬೆರಳೆಣಿಕೆಯ ಅಧಿಕಾರಿಗಳು ಮಧ್ಯವರ್ಥಿಗಳ ಕಾಟದಿಂದ ಬಹಳಷ್ಟು ದಿನಗಳ ಸಮಯ ತೆಗೆದುಕೊಳ್ಳುತ್ತಿತ್ತು. ಇದೀಗ M-Parivahan ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಡೂಪ್ಲಿಕೇಫ್ DL ಮತ್ತೆ RC ಗೆ ಅಪ್ಲೈ ಮಾಡಬಹುದು. ಅಪ್ಲೈ ಮಾಡುವ ಸಂಧರ್ಭ ಅದು E-Lost ರಿಪೋರ್ಟ್ ಕೇಳುತ್ತದೆ. ಅದನ್ನೂ ಅಪ್ಲೋಡ್ ಮಾಡಿ ಚಲನ್ ಅಮೌಂಟ್ ಆನ್ಲೈನ್ ಪಾವತಿ ಮಾಡಿದರೆ 45 ದಿನಗಳ ಒಳಗೆ ಸೆಕೆಂಡ್ ಕಾಪಿ DL ಮತ್ತೆ RC ಮನೆ ವಿಳಾಸಕ್ಕೆ ಬರುತ್ತದೆ. ಈ ಮಾಹಿತಿ ನಿಮಗೆ ಉಪಯೋಗ ಅಂತನಿಸಿದರೆ ಇತರರ ಜೊತೆಗೂ ಹಂಚಿಕೊಳ್ಳಿ.

ಬರಹ : ಪ್ರೇಮ್ ತೋಕೂರು

You may also like

Leave a Comment