Home Uncategorizedಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಏ.10ರಿಂದ ಆರಂಭ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಏ.10ರಿಂದ ಆರಂಭ

by anamika

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಏ.10ರಿಂದ ಆರಂಭ

ಪುತ್ತೂರು: ಇತಿಹಾಸ ಪ್ರಸಿದ್ಧ ದ ವಾರ್ಷಿಕ ಜಾತ್ರೆ ಏಪ್ರಿಲ್ 10ರಿಂದ ಭಕ್ತಿಭಾವದಿಂದ ಆರಂಭಗೊಳ್ಳಲಿದೆ. ಜಾತ್ರೆಯ ಅಂಗವಾಗಿ ಪ್ರತಿದಿನ ಶ್ರೀ ದೇವರ ಉತ್ಸವ ಬಲಿ, ಪೇಟೆ ಸವಾರಿ ಹಾಗೂ ಕಟ್ಟೆ ಪೂಜೆಗಳು ನಡೆಯಲಿದ್ದು, ಭಕ್ತರಿಗಾಗಿ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಏಪ್ರಿಲ್ 10ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಲಿದ್ದು, ಸಂಜೆದಿಂದ ಪೇಟೆ ಸವಾರಿ ಆರಂಭವಾಗುತ್ತದೆ. ಜಾತ್ರೆಯ ಅವಧಿಯಲ್ಲಿ ಪ್ರತಿದಿನ ವಿವಿಧ ಕಟ್ಟೆಗಳಲ್ಲಿ ಶ್ರೀ ದೇವರು ಪೂಜೆ ಸ್ವೀಕರಿಸಲಿದ್ದಾರೆ. ದೇವಳದ ನಟರಾಜ ವೇದಿಕೆಯಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಜಗೋಪುರದಲ್ಲಿ ನಿರಂತರ ಭಜನೆ, ಕೆರೆಯ ಬಳಿಯ ಅನ್ನಪ್ರಸಾದ ವಿತರಣೆ ನಡೆಯಲಿದೆ.

ಜಾತ್ರೆಯ ಪ್ರಮುಖ ಆಕರ್ಷಣೆಗಳಾಗಿ ಏಪ್ರಿಲ್ 17ರಂದು ಬ್ರಹ್ಮರಥೋತ್ಸವ ಹಾಗೂ ‘ಪುತ್ತೂರು ಬೆಡಿ’ ಸಿಡಿಮದ್ದು ಪ್ರದರ್ಶನ, ಏಪ್ರಿಲ್ 16ರಂದು ತೆಪ್ಪೋತ್ಸವ, ಹಾಗೂ ಏಪ್ರಿಲ್ 19ರಂದು ಧ್ವಜಾವರೋಹಣ ನಡೆಯಲಿವೆ. ಏಪ್ರಿಲ್ 20ರಂದು ಸಂಪ್ರೋಕ್ಷಣೆ ಹಾಗೂ ದೈವಗಳ ನೇಮ ಕಾರ್ಯಕ್ರಮಗಳೊಂದಿಗೆ ಜಾತ್ರೆ ಸಮಾಪ್ತಿಗೊಳ್ಳಲಿದೆ.

ಈ ಬಾರಿ ಭಕ್ತರ ಸೌಕರ್ಯಕ್ಕಾಗಿ ಅನ್ನಪೂರ್ಣ ಭೋಜನ ಮಂಟಪವನ್ನು ವಿಸ್ತರಿಸಲಾಗಿದ್ದು, ಸುಮಾರು 25 ಸಾವಿರ ಮಂದಿಗೆ ಏಕಕಾಲದಲ್ಲಿ ಅನ್ನಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ದೇವಳದ ರಾಜಾಂಗಣದಲ್ಲಿ ಐದು ಕಟ್ಟೆಗಳನ್ನು ಶಿಲಾಮಯವಾಗಿ ಪುನರ್‌ನಿರ್ಮಿಸಲಾಗಿದ್ದು, ಜಾತ್ರೆಗೆ ಮುನ್ನ ವಾಸ್ತು ಹೋಮವೂ ನೆರವೇರಿಸಲಾಗಿದೆ.

ಶಾಸಕ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಉತ್ಸವಗಳು ವ್ಯವಸ್ಥಿತವಾಗಿ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮನವಿ ಮಾಡಿದ್ದಾರೆ.

You may also like

Leave a Comment