ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಮಧ್ಯಾಹ್ನ 3ಕ್ಕೆ ಫಲಿತಾಂಶ ಘೋಷಣೆ
ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ, ಉಡುಪಿ ಅಗ್ರಸ್ಥಾನ ಉಳಿಸುವ ವಿಶ್ವಾಸ
ಮಂಗಳೂರು/ಉಡುಪಿ: ರಾಜ್ಯದ ದ್ವಿತೀಯ ಪಿಯುಸಿ (PUC) ಪರೀಕ್ಷೆ-1ರ ಫಲಿತಾಂಶ ಇಂದು (ಏಪ್ರಿಲ್ 9) ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ. ಕಳೆದ ಹಲವು ವರ್ಷಗಳಿಂದ ಉತ್ತಮ ಸಾಧನೆ ಮಾಡುತ್ತಿರುವ ಹಾಗೂ ಜಿಲ್ಲೆಗಳು ಈ ಬಾರಿಯೂ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಕಾಯ್ದುಕೊಳ್ಳಲಿವೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ಪ್ರಕಟಿಸಿರುವಂತೆ, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ https://karresults.nic.in ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.
ಫಲಿತಾಂಶ ವೀಕ್ಷಣೆ ವಿಧಾನಗಳು:
- ಅಧಿಕೃತ ವೆಬ್‌ಸೈಟ್ ಮೂಲಕ
- ಮೊಬೈಲ್ ಆ್ಯಪ್
- ನೊಂದಾಯಿತ ಮೊಬೈಲ್ ಸಂಖ್ಯೆಗೆ SMS/ವಾಟ್ಸ್ಯಾಪ್ ಮೂಲಕ
- ಕಾಲೇಜು ನೋಟಿಸ್ ಬೋರ್ಡ್‌ಗಳಲ್ಲಿ
ಈ ಬಾರಿ ವಿದ್ಯಾರ್ಥಿಗಳಿಗೆ ಮತ್ತೊಂದು ವಿಶೇಷ ಸೌಲಭ್ಯ ನೀಡಲಾಗಿದ್ದು, ಡಿಜಿಟಲ್ ಅಂಕಪಟ್ಟಿಯನ್ನು ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು https://www.digilocker.gov.in ನಲ್ಲಿ ಲಾಗಿನ್ ಆಗಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಬಹುದು.
ರಾಜ್ಯದಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಫಲಿತಾಂಶದ ನಿರೀಕ್ಷೆ ತಾರಕಕ್ಕೇರಿದ್ದು, ಕರಾವಳಿ ಜಿಲ್ಲೆಗಳು ಮತ್ತೊಮ್ಮೆ ತಮ್ಮ ಸಾಧನೆಯನ್ನು ಮುಂದುವರಿಸಲಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.