40
🔰 ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ 2026 ಘೋಷಣೆ: ಐವರು ಸಾಧಕರಿಗೆ ಗೌರವ 🔰
ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ 2026ನೇ ಸಾಲಿನ ಪ್ರತಿಷ್ಠಿತ ‘ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ಗೆ ಐವರು ಗಣ್ಯರು ಭಾಜನರಾಗಿದ್ದಾರೆ.
ರಾಜ್ಯದಲ್ಲಿ ಸಾಮಾಜಿಕ ನ್ಯಾಯ, ಹೋರಾಟ, ಸಾಹಿತ್ಯ ಹಾಗೂ ಸೇವಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ನಾಳೆ (ಏಪ್ರಿಲ್ 14) ಅಂಬೇಡ್ಕರ್ ಜಯಂತಿ ಅಂಗವಾಗಿ ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
🏅 ಪ್ರಶಸ್ತಿ ಪುರಸ್ಕೃತರು:
- ಮಂಗಳೂರು ವಿಜಯ – ಹೋರಾಟ / ಸಾಹಿತ್ಯ
- ಕೋಲಾರದ ಸಿ. ಎಂ. ಮುನಿಯಪ್ಪ – ಹೋರಾಟ / ಪತ್ರಿಕೋದ್ಯಮ
- ಹಾಸನದ ಹೆಚ್.ಎನ್. ಅಣ್ಣಯ್ಯ – ಹೋರಾಟ
- ಕಲಬುರಗಿಯ ಹನುಮಂತರಾವ್ ಬಿ. ದೊಡ್ಡಮನಿ – ಸಾಹಿತ್ಯ / ಸಂಘಟನೆ
- ಬೆಳಗಾವಿಯ ಶೋಭ ಗಸ್ತಿ – ದೇವದಾಸಿ ವಿಮುಕ್ತಿ
ಸಾಮಾಜಿಕ ಸಮಾನತೆ, ಹಕ್ಕುಗಳ ಹೋರಾಟ ಹಾಗೂ ಸಮಾಜದ ಅಭಿವೃದ್ಧಿಗೆ ನೀಡಿದ ಸೇವೆಯನ್ನು ಪರಿಗಣಿಸಿ ಈ ಸಾಧಕರನ್ನು ಗೌರವಿಸಲಾಗುತ್ತಿದೆ.