Home Uncategorizedಬಲ್ನಾಡು ಉಳ್ಳಾಲ್ತಿ ದೈವಸ್ಥಾನದಲ್ಲಿ ಕಿರುವಾಳು ಭಂಡಾರ ಪೂರ್ವಭಾವಿ ಸಭೆ 🔰

ಬಲ್ನಾಡು ಉಳ್ಳಾಲ್ತಿ ದೈವಸ್ಥಾನದಲ್ಲಿ ಕಿರುವಾಳು ಭಂಡಾರ ಪೂರ್ವಭಾವಿ ಸಭೆ 🔰

by anamika

 ಬಲ್ನಾಡು ಉಳ್ಳಾಲ್ತಿ ದೈವಸ್ಥಾನದಲ್ಲಿ ಕಿರುವಾಳು ಭಂಡಾರ ಪೂರ್ವಭಾವಿ ಸಭೆ 🔰

ಪುತ್ತೂರು: ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನ ವತಿಯಿಂದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕಿರುವಾಳು ಭಂಡಾರ ಆಗಮನ ಹಾಗೂ ವಾರ್ಷಿಕ ನೇಮೋತ್ಸವದ ಪೂರ್ವಭಾವಿ ಸಭೆ ದೈವಸ್ಥಾನದ ಸಭಾಂಗಣದಲ್ಲಿ ನೆರವೇರಿತು.

ಸಭೆಯಲ್ಲಿ ತೀರ್ಮಾನಿಸಿದಂತೆ, ಏಪ್ರಿಲ್ 16ರಂದು ಕಿರುವಾಳು ಭಂಡಾರ ಆಗಮನದ ಪ್ರಯುಕ್ತ ಭಕ್ತಾದಿಗಳಿಗೆ ಬೆಳಿಗ್ಗೆಯಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಸಂಜೆ 3ರಿಂದ 5ರವರೆಗೆ ಮಲ್ಲಿಗೆ ಸಮರ್ಪಿಸಿ ಪ್ರಸಾದ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಸಂಜೆ 5 ಗಂಟೆಗೆ ಕಿರುವಾಳು ಭಂಡಾರ ದೈವಸ್ಥಾನದಿಂದ ಹೊರಟು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಲಿದೆ. ಬೈಪಾಸ್ ರಸ್ತೆ ಮೂಲಕ ಮಲ್ಲಿಗೆ ಸಮರ್ಪಿಸುವ ಭಕ್ತರು ದೇವಸ್ಥಾನಕ್ಕೆ ತಂದು ಒಪ್ಪಿಸಬೇಕು ಎಂದು ತಿಳಿಸಲಾಯಿತು.

ಇದೇ ವೇಳೆ ಏಪ್ರಿಲ್ 28ರಂದು ನಡೆಯಲಿರುವ ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

You may also like

Leave a Comment