ಕೊಡಿಮಾರು ಅಬೀರ ಶ್ರೀ ಉಳ್ಳಾಕುಲು, ವ್ಯಾಘ್ರ ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವಕ್ಕೆ ಗೊನೆ ಮುಹೂರ್ತ
ಕಡಬ ತಾಲೂಕು ಬೆಳಂದೂರು ಗ್ರಾಮದ ಕೊಡಿಮಾರು ಅಬೀರ ಶ್ರೀ ಉಳ್ಳಾಕುಲು , ವ್ಯಾಘ್ರ ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಎ 20,21ರಂದು ನಡೆಯಲಿದ್ದು, ನೇಮೋತ್ಸವದ ಗೊನೆ ಮುಹೂರ್ತ ಕಾರ್ಯಕ್ರಮವು ಎ.15 ರಂದು ನಡೆಯಿತು.ಅರ್ಚಕ ಶಿವರಾಮ ಉಪಾಧ್ಯಾಯ ಕಲ್ಪಡ ಧಾರ್ಮಿಕ ವಿಧಿ ವಿಧಾನ ನೇರವೇರಿಸಿದರು.
ಈ ಸಂದರ್ಭದಲ್ಲಿ ತರವಾಡು ಮನೆಯ ಕೃಷ್ಣಪ್ಪ ಗೌಡ ಕಂಡೂರು,ದೈವಸ್ಥಾನದ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ತಿಮ್ಮಪ್ಪ ಗೌಡ ಕಾಯೆರ್ತಡಿ, ಅಧ್ಯಕ್ಷ ಉದಯ ರೈ ಮಾದೋಡಿ, ಉಪಾಧ್ಯಕ್ಷ ರುಕ್ಮಯ್ಯ ಗೌಡ ಅಜಿರಂಗಳ, ಚಂದಪ್ಪ ಗೌಡ ಹೊಸೊಕ್ಲು, ಲಿಂಗಪ್ಪ ಗೌಡ ಸಾರಕರೆ, ಕುಶಾಲಪ್ಪ ಗೌಡ ಪನೆತ್ತಡಿ,ಸುಂದರ ಗೌಡ ಕಂಡೂರು, ಗಂಗಾಧರ ಆಚಾರ್ಯ ಅಬೀರ ಪ್ರಧಾನ ಕಾರ್ಯದರ್ಶಿ ಜಯಂತ ಅಬೀರ, ಕೋಶಾಧಿಕಾರಿ ಶೇಷಪ್ಪ ಕರೆಮನೆ, ಪದ್ಮಯ್ಯ ಗೌಡ ಹೊಸೊಕ್ಲು,ದೈವಗಳ ಸೇವಾಕರ್ತರಾದ ವಿಷ್ಣು ಗೌಡ ಅಬೀರ ಉಪಸ್ಥಿತರಿದ್ದರು.ಎ 20 ರಂದು ಬೆಳಿಗ್ಗೆ ತೋರಣ ಮುಹೂರ್ತ, ಸ್ವಸ್ತಿ ಪುಣ್ಯಹವಾಚನ, ಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ ಹಾಗೂ ತಂಬಿಲ ಮತ್ತು ರಾತ್ರಿ ದೈವಗಳ ಭಂಡಾರ ಹಿಡಿಯುವುದು.ಎ 21ರಂದು ಬೆಳಿಗ್ಗೆ ಉಳ್ಳಾಕುಲು ದೈವಗಳ ನೇಮೋತ್ಸವ,ಬೈಸು ನಾಯಕ,ಬೇಡ ದೈವಗಳ ನೇಮೋತ್ಸವ, ಚಾಮುಂಡಿ ,ಗುಳಿಗ ದೈವಗಳ ನೇಮೋತ್ಸವ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಂತರ ಕೋಜಿಲೆ ಬಿಡುವುದು.