Home Uncategorizedಲೋಕಸಭೆ ಸ್ಥಾನಗಳ ಸಂಖ್ಯೆ 815ಕ್ಕೆ ಏರಿಕೆ ಪ್ರಸ್ತಾವನೆ: ಮಹಿಳೆಯರಿಗೆ 272 ಸ್ಥಾನ ಮೀಸಲು

ಲೋಕಸಭೆ ಸ್ಥಾನಗಳ ಸಂಖ್ಯೆ 815ಕ್ಕೆ ಏರಿಕೆ ಪ್ರಸ್ತಾವನೆ: ಮಹಿಳೆಯರಿಗೆ 272 ಸ್ಥಾನ ಮೀಸಲು

by anamika

ಲೋಕಸಭೆ ಸ್ಥಾನಗಳ ಸಂಖ್ಯೆ 815ಕ್ಕೆ ಏರಿಕೆ ಪ್ರಸ್ತಾವನೆ: ಮಹಿಳೆಯರಿಗೆ 272 ಸ್ಥಾನ ಮೀಸಲು

 

ನವದೆಹಲಿ: ದೇಶದ ಸಂಸದೀಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ದಾರಿ ಮಾಡುವಂತೆ, ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆಯನ್ನು ಪ್ರಸ್ತುತ 543ರಿಂದ 815ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಕಾನೂನು ಸಚಿವ ಲೋಕಸಭೆಯಲ್ಲಿ ಮಂಡಿಸಿದ್ದಾರೆ.

‘ನಾರಿ ಶಕ್ತಿ’ ಮಸೂದೆ ಜಾರಿಯಿಂದ ಈ ಬದಲಾವಣೆ ಸಾಧ್ಯವಾಗಲಿದ್ದು, ಮಹಿಳಾ ಪ್ರತಿನಿಧಿತ್ವವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಇದು ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಸದಸ್ಯರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಮಹಿಳೆಯರಿಗೆ ಒಟ್ಟು 272 ಸ್ಥಾನಗಳು ಮೀಸಲಾಗುವ ಸಾಧ್ಯತೆ ಇದೆ. ಕ್ಷೇತ್ರ ಮರು ವಿಂಗಡಣೆ (ಡಿಲಿಮಿಟೇಶನ್) ಪ್ರಕ್ರಿಯೆಯನ್ನು ಸಮತೋಲನದೊಂದಿಗೆ ನಡೆಸಲಾಗುವುದು, ಯಾವುದೇ ರಾಜ್ಯಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.

ಇದೇ ವೇಳೆ, ಈ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸದೆ ಸಹಕಾರ ನೀಡುವಂತೆ ಪ್ರತಿಪಕ್ಷಗಳಿಗೆ ಸಚಿವರು ಮನವಿ ಮಾಡಿದ್ದಾರೆ.

 

You may also like

Leave a Comment