Home Uncategorizedರಾಜ್ಯದ ಜನತೆಗೆ ‘ವಿದ್ಯುತ್ ದರ ಏರಿಕೆ’ ಶಾಕ್!

ರಾಜ್ಯದ ಜನತೆಗೆ ‘ವಿದ್ಯುತ್ ದರ ಏರಿಕೆ’ ಶಾಕ್!

by anamika

ರಾಜ್ಯದ ಜನತೆಗೆ ‘ವಿದ್ಯುತ್ ದರ ಏರಿಕೆ’ ಶಾಕ್!

ಸುಡುವ ಬಿಸಿಲಿನ ಬೇಗೆಯಿಂದ ಕಂಗಾಲಾಗಿರುವ ರಾಜ್ಯದ ಜನರಿಗೆ ವಿದ್ಯುತ್ (ಎಲ್ಲಾ ಎಸ್ಕಾಂಗಳು-ESCOM) ಗ್ರಾಹಕರಿಗೆ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (KERC) ವಿದ್ಯುತ್ ದರವನ್ನು ಏರಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಹೊಸ ಆದೇಶದನ್ವಯ ಪ್ರತಿ ಯೂನಿಟ್ ವಿದ್ಯುತ್ ಬಳಕೆಯ ಮೇಲೆ 56 ಪೈಸೆ ಹೆಚ್ಚುವರಿ ಹೊರೆಯನ್ನು ಗ್ರಾಹಕರು ಹೊರಬೇಕಾಗಿದೆ.

ಕೆಇಆರ್‌ಸಿ ಹೊರಡಿಸಿರುವ ಆದೇಶದ ಪ್ರಕಾರ, ಈ ದರ ಏರಿಕೆಯು 2024-25ರ ಆರ್ಥಿಕ ವರ್ಷದ ಆದಾಯದ ಕೊರತೆಯನ್ನು ಸರಿದೂಗಿಸಲು ಮಾಡಲಾದ ‘ಟ್ರೂ ಅಪ್’ (True up Charges) ಪ್ರಕ್ರಿಯೆಯಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಬೆಸ್ಕಾಂ ಒಟ್ಟು 34,087.94 ಕೋಟಿ ರೂಪಾಯಿ ಆದಾಯವನ್ನು ನಿರೀಕ್ಷಿಸಿತ್ತು. ಆದರೆ, ವಾಸ್ತವದಲ್ಲಿ ವಿದ್ಯುತ್ ಮಾರಾಟದಿಂದ ಬಂದ ಆದಾಯ ಕೇವಲ 32,019.56 ಕೋಟಿ ರೂಪಾಯಿಗಳು ಮಾತ್ರ. ಇದರಿಂದಾಗಿ ಬೆಸ್ಕಾಂಗೆ ಬರೋಬ್ಬರಿ 2,068.38 ಕೋಟಿ ರೂಪಾಯಿಗಳ ಬೃಹತ್ ಆದಾಯದ ಕೊರತೆ ಉಂಟಾಗಿದೆ.

ಈ ಎರಡು ಸಾವಿರ ಕೋಟಿಗೂ ಅಧಿಕ ಮೊತ್ತದ ಕೊರತೆಯನ್ನು ತುಂಬಿಕೊಳ್ಳಲು ಎಸ್ಕಾಂಗಳು ದರ ಏರಿಕೆಯ ಪ್ರಸ್ತಾವನೆಯನ್ನು ಸಲ್ಲಿಸಿದ್ದವು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಕೆಇಆರ್ಸಿ, ಕೊರತೆಯನ್ನು ನೀಗಿಸಲು ಪ್ರತಿ ಯೂನಿಟ್‌ಗೆ 56 ಪೈಸೆಯಂತೆ ಗ್ರಾಹಕರಿಂದ ವಸೂಲಿ ಮಾಡಲು ಅನುಮತಿ ನೀಡಿದೆ.

You may also like

Leave a Comment