Home Uncategorizedಮಹಿಳೆಯರಿಗೆ ಹಕ್ಕು ಮತ್ತು ಅವಕಾಶ ಸಿಗಬಾರದೆಂಬುದೇ ಕಾಂಗ್ರೆಸ್ ನ ಷಡ್ಯಂತ್ರ |ಇಂದಿರಾ.ಬಿ.ಕೆಅಧ್ಯಕ್ಷರು ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ

ಮಹಿಳೆಯರಿಗೆ ಹಕ್ಕು ಮತ್ತು ಅವಕಾಶ ಸಿಗಬಾರದೆಂಬುದೇ ಕಾಂಗ್ರೆಸ್ ನ ಷಡ್ಯಂತ್ರ |ಇಂದಿರಾ.ಬಿ.ಕೆಅಧ್ಯಕ್ಷರು ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ

by anamika
ಮಹಿಳೆಯರಿಗೆ ಹಕ್ಕು ಮತ್ತು ಅವಕಾಶ ಸಿಗಬಾರದೆಂಬುದೇ ಕಾಂಗ್ರೆಸ್ ನ ಷಡ್ಯಂತ್ರ
ಇಂದಿರಾ.ಬಿ.ಕೆ
ಅಧ್ಯಕ್ಷರು ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ

 

ಭಾರತದ ರಾಜಕಾರಣದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುವ ಕಾಂಗ್ರೆಸ್ ಪಕ್ಷದ ಅಸಲಿ ಮುಖವಾಡ ಕಳಚಿ ಬಿದ್ದಿದೆ.ಮಹಿಳೆಯರಿಗೆ 33% ಮೀಸಲಾತಿ ನೀಡುವ ನಿರ್ಧಾರಕ್ಕೆ ಅಡ್ಡಗಾಲು ಹಾಕುವ ಮೂಲಕ ಕಾಂಗ್ರೆಸ್ ತನ್ನ ಮಹಿಳಾ ವಿರೋಧಿ ಧೋರಣೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ಸುಳ್ಯ ಮಂಡಲ ಮಹಿಳಾ ಮೋರ್ಚಾ ಕಾಂಗ್ರೆಸ್ ಪಕ್ಷದ ಈ ನಡೆಯನ್ನು ಖಂಡಿಸುತ್ತದೆ ಎಂದು ಸುಳ್ಯ ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷರಾದ

ಇಂದಿರಾ ಬಿ ಕೆ ಹೇಳಿದರು

ಲೋಕ ಸಭೆ ಹಾಗೂ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕಾಯಿದೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನಡೆಗೆ ಧಿಕ್ಕಾರ ಹೇಳಿದ ಅವರು ನಾರಿ ಶಕ್ತಿ ಈ ದೇಶದ ಆಡಳಿತದಲ್ಲಿ ಮುನ್ನುಗ್ಗಿ ಹೋಗಲು ಒಂದು ಹೆಜ್ಜೆ ಬಾಕಿ ಇತ್ತು. ಒಂದು ಐತಿಹಾಸಿಕ ಅವಕಾಶವೂ ಇತ್ತು. ಆದರೆ ಕಾಂಗ್ರೆಸ್ ಮತ್ತು ಅದರ ಮೈತ್ರಿ ಕೂಟದ ಕೈಗಳು ಈ ಆವಕಾಶವನ್ನು ಕಿತ್ತು ಕೊಂಡಿದೆ.ದಿಕ್ಕಾರವಿರಲಿ ಈ ನಡೆಗೆ, ಮುಂದಿನ ದಿನಗಳಲ್ಲಿ ನಾರಿ ಶಕ್ತಿಗೆ ಗೆಲುವು ಸಿಕ್ಕೇ ಸಿಗುತ್ತದೆ ಎಂದು ಅವರು ಹೇಳಿದರು.

You may also like

Leave a Comment