Home Uncategorized“ಯಕ್ಷಗಾನ ನಾಟ್ಯ ವೈಭವ”ಕ್ಕೆ ಸಜ್ಜಾದ ಮೆಣಸಿನಕಾನ

“ಯಕ್ಷಗಾನ ನಾಟ್ಯ ವೈಭವ”ಕ್ಕೆ ಸಜ್ಜಾದ ಮೆಣಸಿನಕಾನ

by anamika

ಯಕ್ಷಗಾನ ಕಾರ್ಯಕ್ರಮಕ್ಕೆ ಮೆರುಗು ತರುವ ಕಲಾವಿದರ ಬಳಗ💫

ದೆಲಂಪಾಡಿ: ಸ್ಥಳೀಯವಾಗಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರ ಅದ್ಭುತ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲಿದೆ. ಭಾಗವತರಾಗಿ ಶ್ರೀ ರವಿಕೃಷ್ಣ ದಂಬೆ, ಶ್ರೀ ಸುರೇಶ್ ಹೆಗಡೆ, ಶ್ರೀ ಮೋಹನ ಮೆಣಸಿನಕಾನ ಹಾಗೂ ಶ್ರೀ ಮನುರಾಜ್ ರೈ ತಮ್ಮ ಸ್ವರಮಾಧುರ್ಯದಿಂದ ಕಾರ್ಯಕ್ರಮಕ್ಕೆ ಜೀವ ತುಂಬಲಿದ್ದಾರೆ.

ಪಾತ್ರವರ್ಗದಲ್ಲಿ ಕುಮಾರಿ ಅನನ್ಯಾ ಜಯರಾಜ್, ಕುಮಾರಿ ಅಂಜನಾ ಜಯರಾಜ್, ಕುಮಾರಿ ನಾಧ್ಯ ಕೃಷ್ಣ, ಕುಮಾರಿ ಅಹನ, ಕುಮಾರಿ ಪೂಜಾ ಶ್ರೀ ಮತ್ತು ಮಾಸ್ಟರ್ ಅದ್ವೈತ್ ತಮ್ಮ ಅಭಿನಯ ಮೂಲಕ ಭಾಗವಹಿಸಲಿದ್ದಾರೆ

ಹಿಮ್ಮೇಳದಲ್ಲಿ ಚೆಂಡೆ ಮತ್ತು ಮದ್ದಲೆ ವಾದಕರಾಗಿ ಶ್ರೀ ಪ್ರಮೋದ್ ಕುಮಾರ್ ಪಾಣಾಜೆ, ಕುಮಾರಿ ವಂದನಾ ಮಾಲೆಂಕಿ, ಶ್ರೀ ಸದಾನಂದ ಮಯ್ಯಾಳ, ಶ್ರೀ ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಹಾಗೂ ಮಾಸ್ಟರ್ ಆಶ್ರಯ್ ಪುತ್ತೂರು ಸಮನ್ವಯಿತ ಸಂಗೀತದೊಂದಿಗೆ ಪ್ರದರ್ಶನವನ್ನು ನೀಡಲಿದ್ದು.

ಪಾತ್ರವರ್ಗದಲ್ಲಿ ಶ್ರೀ ಮನೀಶ್ ಧರ್ಮತ್ತಡ್ಕ, ಕುಮಾರಿ ಕವನಾ, ಕುಮಾರಿ ಅನನ್ಯಾ ಜಯರಾಜ್ ಹಾಗೂ ಕುಮಾರ್ ಯಶ್ವಂತ್ ಮೇನಾಲ ಅವರು ಸಹ ಪ್ರಮುಖ ಪಾತ್ರಗಳನ್ನು ನಿರ್ವಹಿಸಲೀದ್ದಾರೆ.

ಕಾರ್ಯಕ್ರಮದ ವೇಷಭೂಷಣವನ್ನು ಶ್ರೀ ಮಹಾಬಲ ಭಟ್ (ರಂಗ ಸುರಭಿ, ಕಲ್ಮಡ್ಕ) ನಿರ್ವಹಿಸಿದ್ದು, ಧ್ವನಿ ಮತ್ತು ಬೆಳಕು ವ್ಯವಸ್ಥೆಯನ್ನು ಶ್ರೀ ಶ್ರೀಧರ ಪಾಟಾಳಿ (ಪೆರ್ಣೆ ಶ್ರೀ ಲೈಟ್ಸ್ ಆಂಡ್ ಸೌಂಡ್ಸ್) ಇವರ ತಂಡ ಕಾರ್ಯ ನಿರ್ವಹಿಸಲಿದೆ

ಈ ಕಾರ್ಯಕ್ರಮಕ್ಕೆ ಸರಕಾರಿ ಯುಪಿ ಸ್ಕೂಲ್ ದೇಲಂಪಾಡಿಯ ಅಧ್ಯಾಪಕಿ ಶ್ರೀಮತಿ ಶೈಲಜಾ ಜಯರಾಜ್ ಸಹಕಾರ ನೀಡಲಿದ್ದಾರೆ ಎಂದು  ಪ್ರಕಟಣೆಯಲ್ಲಿ ತಿಳಿಸಲಾಗಿದೆ

You may also like

Leave a Comment