Home Uncategorizedಬಸ್ ಪ್ರಯಾಣಿಕರೇ ಎಚ್ಚರ! ಮೊಬೈಲ್‌ನಲ್ಲಿ ಜೋರಾಗಿ ಸೌಂಡ್ ಹಾಕಿದ್ರೆ ಬಸ್ಸಿನಿಂದ ಕೆಳಗಿಳಿಸ್ತಾರೆ!

ಬಸ್ ಪ್ರಯಾಣಿಕರೇ ಎಚ್ಚರ! ಮೊಬೈಲ್‌ನಲ್ಲಿ ಜೋರಾಗಿ ಸೌಂಡ್ ಹಾಕಿದ್ರೆ ಬಸ್ಸಿನಿಂದ ಕೆಳಗಿಳಿಸ್ತಾರೆ!

by anamika

ಬಸ್ ಪ್ರಯಾಣಿಕರೇ ಎಚ್ಚರ!

 ಮೊಬೈಲ್‌ನಲ್ಲಿ ಜೋರಾಗಿ ಸೌಂಡ್ ಹಾಕಿದ್ರೆ ಬಸ್ಸಿನಿಂದ ಕೆಳಗಿಳಿಸ್ತಾರೆ!

​ ಕೆಎಸ್‌ಆರ್‌ಟಿಸಿ ಅಥವಾ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ಇನ್ಮುಂದೆ ನೀವು ಮೊಬೈಲ್ ಬಳಸುವಾಗ ಜಾಗರೂಕರಾಗಿರಬೇಕು. ಸಹ-ಪ್ರಯಾಣಿಕರಿಗೆ ತೊಂದರೆಯಾಗುವಂತೆ ಜೋರಾಗಿ ಹಾಡು ಕೇಳುವುದು ಅಥವಾ ವಿಡಿಯೋ ನೋಡುವುದಕ್ಕೆ ಈಗ ಬ್ರೇಕ್ ಬಿದ್ದಿದೆ!

*ಏನಿದೆ ಹೊಸ ನಿಯಮದಲ್ಲಿ?*

​ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ಅನ್ವಯ, ಬಸ್ಸುಗಳಲ್ಲಿ ಮೊಬೈಲ್ ಮೂಲಕ ಜೋರು ಶಬ್ದ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

 

▶​ಮೊದಲು ತಿಳುವಳಿಕೆ: ಮೊಬೈಲ್‌ನಲ್ಲಿ ಜೋರಾಗಿ ಸೌಂಡ್ ಹಾಕುತ್ತಿದ್ದರೆ ಕಂಡಕ್ಟರ್ ಅಥವಾ ಡ್ರೈವರ್ ಮೊದಲು ನಿಮಗೆ ವಿನಂತಿಸಿಕೊಳ್ಳುತ್ತಾರೆ.

▶​ಮಾತು ಕೇಳದಿದ್ದರೆ ಶಿಕ್ಷೆ: ಒಂದು ವೇಳೆ ನೀವು ಅವರ ಮನವಿಗೆ ಸ್ಪಂದಿಸದಿದ್ದರೆ, ನಿಮ್ಮನ್ನು ಬಸ್ಸಿನಿಂದ ಕೆಳಕ್ಕೆ ಇಳಿಸಲಾಗುತ್ತದೆ.

▶​ಬಸ್ ಸಂಚಾರ ಬಂದ್: ನೀವು ಬಸ್ಸಿನಿಂದ ಕೆಳಗೆ ಇಳಿಯುವವರೆಗೂ ಚಾಲಕ ಬಸ್ಸನ್ನು ಮುಂದೆ ಚಲಿಸುವಂತಿಲ್ಲ!

▶​ಟಿಕೆಟ್ ಹಣ ವಾಪಸ್ ಇಲ್ಲ: ಅತಿ ಮುಖ್ಯವಾದ ವಿಷಯವೆಂದರೆ, ನಿಮ್ಮನ್ನು ಅರ್ಧ ದಾರಿಯಲ್ಲೇ ಕೆಳಗಿಳಿಸಿದರೂ ಸಹ, ನೀವು ನೀಡಿದ ಟಿಕೆಟ್ ಹಣವನ್ನು ಮರುಪಾವತಿಸಲಾಗುವುದಿಲ್ಲ.

▶​ಗಮನಿಸಿ: ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಇತರರ ನೆಮ್ಮದಿಗೆ ಭಂಗ ತರುವುದು ಕಾನೂನು ಬಾಹಿರ. ಇನ್ಮುಂದೆ ಬಸ್‌ನಲ್ಲಿ ರೀಲ್ಸ್ ನೋಡುವಾಗ ಅಥವಾ ಸಾಂಗ್ಸ್ ಕೇಳುವಾಗ ಇಯರ್‌ಫೋನ್ ಬಳಸಿ

You may also like

Leave a Comment