Home Uncategorizedಮೇರಠ್‌ನಲ್ಲಿ 10 ಸಾವಿರ ದಲಿತರ ಜನಿವಾರ ಧಾರಣೆ: ಬ್ರಾಹ್ಮಣ್ಯ ಸ್ವೀಕಾರ

ಮೇರಠ್‌ನಲ್ಲಿ 10 ಸಾವಿರ ದಲಿತರ ಜನಿವಾರ ಧಾರಣೆ: ಬ್ರಾಹ್ಮಣ್ಯ ಸ್ವೀಕಾರ

by anamika

 

ಮೇರಠ್‌ನಲ್ಲಿ 10 ಸಾವಿರ ದಲಿತರ ಜನಿವಾರ ಧಾರಣೆ: ಬ್ರಾಹ್ಮಣ್ಯ ಸ್ವೀಕಾರ

ಬರೋಬ್ಬರಿ 10 ಸಾವಿರದಷ್ಟು ದಲಿತರು ಜನಿವಾರವನ್ನು ಧಾರಣೆ ಮಾಡುವ ಮೂಲಕ ಬ್ರಾಹ್ಮಣ್ಯವನ್ನು ಸ್ವೀಕಾರ ಮಾಡಿರುವ ಅತ್ಯಂತ ಕುತೂಹಲಕಾರಿ ಘಟನೆ ಉತ್ತರ ಪ್ರದೇಶದ ಮೇರಠ್​ನಲ್ಲಿ ನಡೆದಿದೆ.

ಜನಿವಾರವು ವೇದಗಳು, ತ್ರಿಗುಣಗಳು, ಹಾಗೂ ತ್ರಿಮೂರ್ತಿಗಳನ್ನು ಪ್ರತಿನಿಧಿಸುತ್ತವೆ. ಇದನ್ನು ಸಂಪ್ರದಾಯಬದ್ಧವಾಗಿ ಧರಿಸಿದರೆ ಅವರು ಬ್ರಾಹ್ಮಣರಾಗುತ್ತಾರೆ. ಅಂಥದ್ದೇ ಒಂದು ವಿಧಿ-ವಿಧಾನದ ಮೂಲಕ 10 ಸಾವಿರ ಮಂದಿ ಈಗ ಬ್ರಾಹ್ಮಣ ಸಮುದಾಯಕ್ಕೆ ಸೇರ್ಪಡೆಯಾಗಿದ್ದಾರೆ. ಸಾಮಾಜಿಕ ತಾರತಮ್ಯ ಮತ್ತು ವಿಭಜಕ ರಾಜಕೀಯವನ್ನು ಪ್ರತಿಭಟಿಸಿ ಅವರು ಈ ಹೆಜ್ಜೆ ಇಟ್ಟಿದ್ದಾರೆ. ಸಮಾಜದಲ್ಲಿ ಸಮಾನತೆಯ ಸಂದೇಶವನ್ನು ಹರಡುವುದು ಅವರ ಉದ್ದೇಶವಾಗಿದೆ.

ಬ್ರಾಹ್ಮಣ್ಯ ಸ್ವೀಕರಿಸಿದ ಬಳಿಕ ಮಾತನಾಡಿದ ಕೆಲವರು ‘ ಬ್ರಾಹ್ಮಣ ಜಾತಿಯಲ್ಲಿರುವ ಆಚಾರ-ವಿಚಾರಗಳು, ಅವರ ಸಂಪ್ರದಾಯ ಎಲ್ಲವೂ ಖುಷಿಕೊಟ್ಟಿದೆ, ಆದ್ದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಮತ್ತೆ ಕೆಲವರು, ಭೇದಭಾವದಿಂದ ಬೇಸತ್ತಿರುವ ಕಾರಣ, ಎಲ್ಲರೂ ಒಂದೇ ಎಂದು ಸಮಾನತೆಗಾಗಿ ಈ ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ನಾವೆಲ್ಲಾ ಜಾತಿ-ಭೇದ ಮರೆತು ಒಗ್ಗಟ್ಟಾಗಿ ಇರಲು ನೋಡಿದರೂ, ನಮ್ಮ ನಮ್ಮ ನಡುವೆಯೇ ಒಡಕು ತರುವ ಮನಸ್ಥಿತಿಯವರು ಹಲವರು ಇದ್ದಾರೆ. ಕೆಲವು ರಾಜಕೀಯದವರೂ ತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮ ನಡುವೆ ತಂದು ಇಡುತ್ತಿದ್ದಾರೆ.

ನಮ್ಮ ಈ ನಿರ್ಧಾರದಿಂದ ಅವರೆಲ್ಲರೂ ಈಗ ಏನು ಮಾಡುತ್ತಾರೆ ಎಂದು ನೋಡೋಣ’ ಎಂದು ನಾವು ಬ್ರಾಹ್ಮಣ್ಯವನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾರೆ.

You may also like

Leave a Comment