Home Uncategorizedಶೃಂಗೇರಿ ಶಾರದಾ ಪೀಠದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಕ್ಷತಾ ಪ್ರವೀಣ್‌ಗೆ ದ್ವಿತೀಯ ಬಹುಮಾನ

ಶೃಂಗೇರಿ ಶಾರದಾ ಪೀಠದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಕ್ಷತಾ ಪ್ರವೀಣ್‌ಗೆ ದ್ವಿತೀಯ ಬಹುಮಾನ

by anamika

ಶೃಂಗೇರಿ ಶಾರದಾ ಪೀಠದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಕ್ಷತಾ ಪ್ರವೀಣ್‌ಗೆ ದ್ವಿತೀಯ ಬಹುಮಾನ

 

ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ಆವರಣದಲ್ಲಿ ನಟ್ಟೋಜ ಫೌಂಡೇಷನ್ ಟ್ರಸ್ಟ್ ಪ್ರವರ್ತಿತ ಕಾರ್ಯಕ್ರಮದಡಿ, ಶೃಂಗೇರಿ ಶಾರದಾ ಪೀಠದ ವತಿಯಿಂದ ಆಯೋಜಿಸಲಾದ “ಶ್ರೀಶಂಕರ ಭಗವತ್ಪಾದರ ಜೀವನ ಸಂದೇಶ” ಹಾಗೂ “ಮದ್ವಾಲ್ಮೀಕಿ ರಾಮಾಯಣ” ಆಧಾರಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಕ್ಷತಾ ಪ್ರವೀಣ್ ಅವರು ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಈ ಸ್ಪರ್ಧೆಯಲ್ಲಿ ಪುತ್ತೂರು, ಬಂಟ್ವಾಳ, ಸುಳ್ಯ, ಕಡಬ, ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕುಗಳಿಂದ ಅನೇಕ ಸ್ಪರ್ಧಾರ್ಥಿಗಳು ಭಾಗವಹಿಸಿದ್ದು, ತೀವ್ರ ಪೈಪೋಟಿಯ ನಡುವೆ ಅಕ್ಷತಾ ಪ್ರವೀಣ್ ಅವರು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.

ವಿಜೇತರಾಗಿ ಹೊರಹೊಮ್ಮಿದ ಅಕ್ಷತಾ ಪ್ರವೀಣ್ ಅವರು ಜಗದ್ಗುರು ಶ್ರೀ ವಿಧುಶೇಖರಭಾರತಿ ಮಹಾಸ್ವಾಮೀಜಿಗಳ ಆಶೀರ್ವಾದವನ್ನು ಪಡೆದು, ₹18,000 ಮೌಲ್ಯದ ಟ್ಯಾಬ್, ಪ್ರಮಾಣಪತ್ರ ಹಾಗೂ ಇನ್ನಿತರ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕೆಮ್ಮಿಂಜೆ ನಿವಾಸಿ ಪ್ರವೀಣ್ ನಾಯಕ್ ಅವರ ಧರ್ಮಪತ್ನಿಯಾಗಿರುವ ಅಕ್ಷತಾ ಪ್ರವೀಣ್ ಅವರ ಈ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.

You may also like

Leave a Comment