ಸುಳ್ಯ: ನಿನ್ನೆ ಭಾರತ್ ಸಿನೆಮಾಸ್‌ನಲ್ಲಿ ‘ಭಾವ ತೀರ ಯಾನ’ ಪ್ರದರ್ಶನ;ಇಂದು ನಾಳೆ, ವಿಶೇಷ ಶೋ
ಸುಳ್ಯ: ಆರೋಹ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ, ಕನ್ನಡಿಗರ ಮನಗೆದ್ದಿರುವ ಕನ್ನಡ ಪ್ರೇಮಕಥಾ ಚಲನಚಿತ್ರ ‘ಭಾವ ತೀರ ಯಾನ’ ಇಂದು ಸುಳ್ಯದ ಸಿನಿಪ್ರಿಯರ ಮುಂದೆ ಬಂದಿದೆ.
ಸಿನಿಮಾ ವಿವರ ಮತ್ತು ಪ್ರದರ್ಶನದ ಸಮಯ:
ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ ಬಿ.ಕೆ. ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಮಯೂರ್ ಅಂಬೆಕಲ್ಲು ಸಂಗೀತ ಹಾಗೂ ನಿರ್ದೇಶನ ನೀಡಿದ್ದಾರೆ. ತೇಜಸ್ ಕಿರಣ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸುವುದರ ಜೊತೆಗೆ ಸಹ-ನಿರ್ದೇಶನದಲ್ಲಿ ಮೂಡಿ ಬಂದಿದೆ.
ನಿನ್ನೆ (ಮೇ 8): ರಾತ್ರಿ 7:00 ಗಂಟೆಗೆ ಸುಳ್ಯದ ಭಾರತ್ ಸಿನೆಮಾಸ್‌ನಲ್ಲಿ ಅದ್ಧೂರಿಯಾಗಿ ಪ್ರದರ್ಶನಗೊಂಡಿತು.
ವಿಶೇಷ ಪ್ರದರ್ಶನ: ಸಾರ್ವಜನಿಕರ ಬೇಡಿಕೆಯ ಮೇರೆಗೆ ಮೇ 9 ಮತ್ತು ಮೇ 10ರಂದು (ಶನಿವಾರ ಮತ್ತು ಭಾನುವಾರ) ಮಧ್ಯಾಹ್ನ 2:00 ಗಂಟೆಗೆ ವಿಶೇಷ ಪ್ರದರ್ಶನಗಳು ನಡೆಯಲಿವೆ ಎಂದು ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದೆ.
ಕರಾವಳಿ ಭಾಗದ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಈ ಭಾವನಾತ್ಮಕ ಪ್ರೇಮಕಥೆಯನ್ನು ವೀಕ್ಷಿಸಲು ಸುಳ್ಯದ ಸಿನಿಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಿನಿಮಾ ತಂಡ ಈ ಮೂಲಕ ವಿನಂತಿಸಿದೆ.