Home Uncategorizedಉಪ್ಪಿನಂಗಡಿಯಲ್ಲಿ ಭೀಕರ ದುರಂತ: ರೋಡ್ ರೋಲರ್ ಅಡಿಗೆ ಸಿಲುಕಿ ಕಾರ್ಮಿಕ ಮೃತ್ಯು

ಉಪ್ಪಿನಂಗಡಿಯಲ್ಲಿ ಭೀಕರ ದುರಂತ: ರೋಡ್ ರೋಲರ್ ಅಡಿಗೆ ಸಿಲುಕಿ ಕಾರ್ಮಿಕ ಮೃತ್ಯು

by anamika

ಉಪ್ಪಿನಂಗಡಿಯಲ್ಲಿ ಭೀಕರ ದುರಂತ: ರೋಡ್ ರೋಲರ್ ಅಡಿಗೆ ಸಿಲುಕಿ ಕಾರ್ಮಿಕ ಮೃತ್ಯು

📍ಉಪ್ಪಿನಂಗಡಿ: ರಸ್ತೆ ಕಾಮಗಾರಿ ವೇಳೆ ಸಂಭವಿಸಿದ ಭೀಕರ ಅವಘಡದಲ್ಲಿ ಉತ್ತರ ಭಾರತ ಮೂಲದ ಕಾರ್ಮಿಕನೋರ್ವ ರೋಡ್ ರೋಲರ್ ಅಡಿಗೆ ಸಿಲುಕಿ ದುರ್ಮರಣ ಹೊಂದಿದ ಘಟನೆ ಶನಿವಾರ ಗಾಂಧಿಪಾರ್ಕ್ ಸಮೀಪ ನಡೆದಿದೆ.

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭಾಗವಾಗಿ ಸರ್ವೀಸ್ ರಸ್ತೆಯ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ, ರಸ್ತೆ ಬದಿಯಲ್ಲಿ ಮಲಗಿದ್ದ ಕಾರ್ಮಿಕನ ಮೇಲೆ ರೋಡ್ ರೋಲರ್ ಹರಿದ ಪರಿಣಾಮ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಕಾರ್ಮಿಕನ ದೇಹ ಸಂಪೂರ್ಣವಾಗಿ ನಜ್ಜುಗುಜ್ಜಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕಾರ್ಮಿಕನ ಗುರುತು ಹಾಗೂ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಈ ದಾರುಣ ಘಟನೆ ಕಾಮಗಾರಿ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳ ಅಗತ್ಯತೆಯನ್ನು ಮತ್ತೆ ಒತ್ತಿ ಹೇಳುವಂತಾಗಿದೆ.

You may also like

Leave a Comment